ಗುಡ್ಡೆಹೊಸೂರು, ಮಾ. 17: ಇಲ್ಲಿನ ಆನೆಕಟ್ಟೆ ಕೆರೆಯಿಂದ ಕಾವೇರಿ ನದಿ ಸೇರುವ ರಾಜ ಕಾಲುವೆಯನ್ನು ಮೊಯ್ದು ಎಂಬವರು ಒತ್ತುವರಿ ಮಾಡಿಕೊಂಡು ತಡೆಗೊಡೆ ನಿರ್ಮಿಸಿದ್ದರು.

ಹೊಸದಾಗಿ ಜಾಗ ಖರೀದಿಸಿ ಆ ಜಾಗದಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಾಣ ಮಾಡಲು ಗ್ರಾ.ಪಂ.ಯಿಂದ ಪರವಾನಗೆ ಪಡೆಯಬೇಕಿತ್ತು. ಆದರೆ ರಾಜಕಾಲುವೆಯನ್ನು ಒತ್ತುವರಿ ಮಾಡಿ ತಡೆಗೊಡೆ ನಿರ್ಮಿಸಿರುವದನ್ನು ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತೆರವುಗೊಳಿಸಿದರು.