ಮಡಿಕೇರಿ, ಮಾ. 17: ಕುಶಾಲನಗರ ಮತ್ತು ಸುತ್ತಲಿನ ಗ್ರಾ.ಪಂ.ಗಳು ಒಳಗೊಂಡಂತೆ ಕಾವೇರಿ ತಾಲೂಕು ರಚನೆ ಮಾಡುವ ಸಂಬಂಧ ಕಾವೇರಿ ತಾಲೂಕು ಹೋರಾಟ ಸಮಿತಿಯಿಂದ ಕಳೆದ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಈ ಬಾರಿ ಕೂಡ ಸರಕಾರದಿಂದ ಸೂಕ್ತ ಸ್ಪಂದನ ಸಿಗದ ಕಾರಣ ಕಾವೇರಿ ತಾಲೂಕಿನ ಮನವಿಯನ್ನು ಪ್ರಬಲವಾಗಿ ಪ್ರತಿಪಾದಿಸುವ ನಿಟ್ಟಿನಲ್ಲಿ ತಾ. 18 ರಂದು (ಇಂದು) ಮಧ್ಯಾಹ್ನ 1 ಗಂಟೆಗೆ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್, ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವದು.