ಮಡಿಕೇರಿ, ಮಾ.17: ಜಿಲ್ಲೆಯಲ್ಲಿ ಎಂ.ಆರ್. ಲಸಿಕಾ ಅಭಿಯಾನವು ಶೇ.94.46 ಸಾಧನೆಯನ್ನು ಮಾಡಿದ್ದು, ಇನ್ನೂ ಶೇ.5.5 ರಷ್ಟು ಮಕ್ಕಳು ಬಾಕಿಯಿರುವುದರಿಂದ ಪ್ರತಿ ಮಗುವಿಗೂ ಎಂ.ಆರ್.ಲಸಿಕೆ ಹಾಕಬೇಕಿರುವದರಿಂದ ಎಂ.ಆರ್. ಲಸಿಕಾ ಅಭಿಯಾನವನ್ನು ತಾ. 19 ರವರೆಗೆ ಮುಂದುವರೆಸಲಾಗಿದೆ. ಜಿಲ್ಲೆಯಲ್ಲಿ ಇರುವ ಎಲ್ಲಾ ತೋಟ ಕಾರ್ಮಿಕರ ಮಕ್ಕಳು, ವಲಸೆ ಬಂದಿರುವ ಮಕ್ಕಳು, ಲಸಿಕಾ ಸಂದರ್ಭ ಗೈರು ಹಾಜರಾಗಿರುವ ಮಕ್ಕಳಿಗಾಗಿ ಸಮೀಪದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿನವು ಎಂ.ಆರ್.ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದೆ. ಆದ್ದರಿಂದ ಇದರ ಉಪಯೋಗವನ್ನು ಎಲ್ಲಾ ಸಾರ್ವಜನಿಕರು ಪಡೆದುಕೊಂಡು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ ತಿಳಿಸಿದ್ದಾರೆ.