ಮಡಿಕೇರಿ, ಮಾ. 17 : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆ ಎನ್ನುವ ಗೌರವ ತೋರದೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರನ್ನು ಅವಮಾನಿಸಿದ ಉಪಾಧ್ಯಕ್ಷರ ಕ್ರಮವನ್ನು ಖಂಡಿಸುವದಾಗಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾóಕ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ “ಮಾನ ಮರ್ಯಾದೆ” ಎನ್ನುವ ಪದ ಬಳಕೆ ಮಾಡಿ ಸದಸ್ಯರೊಬ್ಬರು ಅಗೌರವ ತೋರಿದ್ದರು. ಈ ಬಾರಿಯ ಸಭೆಯಲ್ಲಿ ತಾಳ್ಮೆ ಕಳೆÉದುಕೊಂಡ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅವರು ಅತಿರೇಕದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.

ಅಧ್ಯಕ್ಷರಿಗೆ ಅವಮಾನ ವಾಗುತ್ತಿದ್ದರೂ ಕಾಂಗ್ರೆಸ್ ಪಕ್ಷದ ಮಹಿಳಾ ಸದಸ್ಯರು ಮೌನಕ್ಕೆ ಶರಣಾಗಿದ್ದರು, ಸಿನಿಮಾ ನೋಡುತ್ತಿದ್ದಂತೆ ನೋಡುತ್ತಿದ್ದರು. ಕಾಂಗ್ರೆಸ್ ಸದಸ್ಯರ ಈ ಕ್ರಮ ಖಂಡನೀಯವೆಂದು ಅಬ್ದುಲ್ ರಜಾóಕ್ ಅಸಮಾಧಾನ ವ್ಯಕ್ತಪಡಿಸಿದರು.

ಕಣ್ಣಾಮುಚ್ಚಾಲೆ ಆಡುತ್ತಿದ್ದರೇ ??

ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಮಹದೇವಪೇಟೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಆರಂಭದಲ್ಲೆ ಸಾರ್ವಜನಿಕರು ಕಳಪೆ ಕಾಮಗಾರಿಯ ಕುರಿತು ಪ್ರತಿಭಟನೆ ನಡೆಸಿದ್ದಾರೆ. ಅಂದು ಸಾರ್ವಜನಿಕರ ಕೂಗಿಗೆ ಸ್ಪಂದಿಸದ 23 ಸದಸ್ಯರುಗಳು ಇಂದು ಸಾಮಾನ್ಯ ಸಭೆಯಲ್ಲಿ ಕಳಪೆ ಕಾಮಗಾರಿ ಎಂದು ಧ್ವನಿ ಎತ್ತುತ್ತಿರುವದರ ಉದ್ದೇಶವೇನೆಂದು ಪ್ರಶ್ನಿಸಿದರು.

ಈ ಹಿಂದೆ ಜುಲೇಕಾಬಿ ಹಾಗೂ ಶ್ರೀಮತಿ ಬಂಗೇರ ಅವರು ಅಧ್ಯಕ್ಷರಾಗಿದ್ದಾಗ ಯಾರೂ ಗಲಾಟೆ ಮಾಡುತ್ತಿರಲಿಲ್ಲ. ಆದರೆ, ಕಾವೇರಮ್ಮ ಸೋಮಣ್ಣ ಅವರು ಕಾನೂನು ಮೀರಿ ಯಾವದೇ ಕ್ರಮ ಕೈಗೊಳ್ಳದೆ ಇರುವದರಿಂದ ಇದನ್ನು ಸಹಿಸದವರು ಸಭೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ರಜಾóಕ್ ಆರೋಪಿಸಿದರು.

ಯುಜಿಡಿ ವಿರುದ್ಧ ನಿರ್ಣಯವಾಗಿತ್ತು

ಸುಮಾರು 10 ವರ್ಷಗಳ ಹಿಂದೆಯೇ ಮಡಿಕೆÉೀರಿಗೆ ಹೊಂದಾಣಿಕೆ ಆಗುವದಿಲ್ಲ ಎನ್ನುವ ಕಾರಣಕ್ಕಾಗಿ ಯುಜಿಡಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ಆದರೆ, ಇಂದು ಅರ್ಧ ಕಾಮಗಾರಿ ಪೂರ್ಣಗೊಂಡ ನಂತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸುವದು ಯಾವ ಕಾರಣಕ್ಕಾಗಿ ಎಂದು ಪ್ರಶ್ನಿಸಿದರು.

ನಗರಸಭೆÉಯ ವಾಣಿಜ್ಯ ಮಳಿಗೆಗಳ ಬಾಡಿಗೆ ಮತ್ತು ಕಂದಾಯ ವಸೂಲಾತಿಯಲ್ಲಿ ಆಗಿರುವ ಅವ್ಯವಹಾರದ ಕುರಿತು ಸದಸ್ಯರು ಯಾಕೆ ಧ್ವನಿ ಎತ್ತುತ್ತಿಲ್ಲವೆಂದು ಪ್ರಶ್ನಿಸಿದ ಅಬ್ದುಲ್ ರಜಾóಕ್, ಪೌರಾಯುಕ್ತರ ಕಾರ್ಯವೈಖರಿಯನ್ನು ಟೀಕಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘÀಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನ ಮಾತನಾಡಿ, ನಗರಸಭೆಯ ವಿರೋಧ ಪಕ್ಷಕ್ಕೆ ತನ್ನ ಜವಾಬ್ದಾರಿ ಮತ್ತು ವಿಪಕ್ಷ ಸ್ಥಾನದ ಪರಿಕಲ್ಪನೆಯೆ ಇಲ್ಲವೆಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಟಿ.ಪಿ. ನಾಣಯ್ಯ, ಪ್ರಧಾನ ಕಾರ್ಯದರ್ಶಿ ಮುನೀರ್ ಮಾಚರ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಂಘÀಟನಾ ಕಾರ್ಯದರ್ಶಿ ಹೆಚ್.ಪಿ. ಚಂದ್ರು ಉಪಸ್ಥಿತರಿದ್ದರು.