ಗೋಣಿಕೊಪ್ಪ, ಮಾ. 17: ಕಾನೂರು ಕುಟ್ಟ ಮುಖ್ಯ ಹೆದ್ದಾರಿಯಲ್ಲಿ ಆಲ್ಟೋ ಕಾರು ಮತ್ತು ಜೆ.ಸಿ.ಬಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಕಾರ್ಮಿಕ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರು ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಟ್ಟದಲ್ಲಿರುವ ತಮ್ಮ ತೋಟದಿಂದ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಕೊಕ್ಕಂಡ ಚೆಂಗಪ್ಪನವರ ಕಾರಿಗೆ ಮತ್ತು ಕುಟ್ಟ ನಿವಾಸಿ ಉದಿಯಂಡ ಸುನಿಲ್ ಅವರಿಗೆ ಸೇರಿದ ಜೆ.ಸಿ.ಬಿ ಪೊನ್ನಂಪೇಟೆ ಕಡೆಯಿಂದ ಕುಟ್ಟಕ್ಕೆ ತೆರಳುತ್ತಿದ್ದ ಸಂದರ್ಭ ಬೆಕ್ಕೆಸೊಡ್ಲೂರುವಿನ ಮಂದÀತವ್ವ ದೇವಸ್ಥಾನಕ್ಕೆ ತೆರಳುವ ರಸ್ತೆ ಜಂಕ್ಷನ್‍ನ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಕಾರು ಜೆ.ಸಿ.ಬಿ.ಯ ಡೂಜóರ್‍ಗೆ ಹೊಡೆದ ಪರಿಣಾಮ ಕಾರಿನ ಮುಂಬಾಗ ಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರು ಚಾಲಿಸುತ್ತಿದ್ದ ಚೆಂಗಪ್ಪನವರ ತಲೆ, ಗಲ್ಲದ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಕೈ ಕಾಲುಗಳು ಮುರಿತಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಹಿಂಬದಿಯಲ್ಲಿ ಕುಳಿತ್ತಿದ್ದ ಕಾರ್ಮಿಕ ಮಹಿಳೆಯ ತಲೆ ಬುರುಡೆ ತೆರೆದುಕೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದು, ಸ್ಥಳಿಯರ ನೆರವಿನಿಂದ ಗೋಣಿಕೊಪ್ಪಲು ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಮೈಸೂರು ಅಸ್ಪತ್ರೆಗೆ ದಾಖಲು ಮಾಡಲಾಗಿದೆ.