ಮಡಿಕೇರಿ, ಮಾ. 17: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ತಾ. 18 ರಂದು (ಇಂದು) 2016-17 ನೇ ಸಾಲಿನ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಅರಸು ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ ವಿತರಿಸಲಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಬಿ.ಜೆ. ಕಾವೇರಿಯಪ್ಪ ‘ಪರಿಸರ ಮಿತ್ರ’ ಶಾಲೆಗಳ ಪರಿಸರ ಚಟುವಟಿಕೆಗಳ ಕುರಿತಂತೆ ಹೊರತಂದಿರುವ ‘ಹಸಿರು -ನನಸಾದ ಕನಸು’ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ತಿಳಿಸಿದ್ದಾರೆ. ಉತ್ತಮ ಪರಿಸರ ಮತ್ತು ವೈವಿಧ್ಯಮಯ ಪರಿಸರ ಚಟುವಟಿಕೆ ಗಳನ್ನು ಅಳವಡಿಸಿಕೊಂಡಿರುವ ಸುಂಟಿಕೊಪ್ಪ ಸಮೀಪದ ಗರಗಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಲ್ಪಡುವ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿಗೆ ಭಾಜನಗೊಂಡಿದೆ. ಈ ಶಾಲೆಗೆ ಪ್ರಶಸ್ತಿಯೊಂದಿಗೆ ರೂ. 30 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವದು. ದ್ವಿತೀಯ ಸ್ಥಾನ ಪಡೆದ 10 ಹಸಿರು ಶಾಲೆಗಳಿಗೆ ತಲಾ ರೂ. 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ 10 ಹಳದಿ ಶಾಲೆಗಳಿಗೆ ತಲಾ ರೂ. 4 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವದು.
‘ಪರಿಸರ ಮಿತ್ರ’ ಶಾಲಾ ಪ್ರಶಸ್ತಿ
ಹಸಿರು ಶಾಲಾ ಪ್ರಶಸ್ತಿ ಪಡೆದ 10 ಶಾಲೆಗಳು: ಸರ್ಕಾರಿ ಪ್ರೌಢಶಾಲೆ, ಹಾಕತ್ತೂರು, ಮಡಿಕೇರಿ (ತಾ), ಸರ್ಕಾರಿ ಪ್ರೌಢಶಾಲೆ, ಸುಂಟಿಕೊಪ್ಪ, ಸೋಮವಾರಪೇಟೆ (ತಾ), ಪಾರಾಣೆ ಪ್ರೌಢಶಾಲೆ, ಪಾರಾಣೆ, ಮಡಿಕೇರಿ (ತಾ), ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ, ಬಸವನಹಳ್ಳಿ, ಸೋಮವಾರಪೇಟೆ (ತಾ), ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಕುಶಾಲನಗರ, ಸೋಮವಾರಪೇಟೆ (ತಾ), ಸರ್ಕಾರಿ ಪ್ರೌಢಶಾಲೆ, ಗೋಣಿಮರೂರು, ಸೋಮವಾರಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗೋಣಿಮರೂರು, ಸೋಮವಾರಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಕ್ಕೆಸೊಡ್ಲೂರು, ವೀರಾಜಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕರಡಿಗೋಡು, ವೀರಾಜಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಳಗದಾಳು, ಮಡಿಕೇರಿ (ತಾ).
ಹಳದಿ ಶಾಲಾ ಪ್ರಶಸ್ತಿ: ಸರ್ಕಾರಿ ಪ್ರೌಢಶಾಲೆ, ಬಸವನಹಳ್ಳಿ, ಸೋಮವಾರಪೇಟೆ (ತಾ), ಸರ್ಕಾರಿ ಪ್ರೌಢಶಾಲೆ, ಕಡಗದಾಳು, ಮಡಿಕೇರಿ (ತಾ), ಸರ್ಕಾರಿ ಪ್ರೌಢಶಾಲೆ, ಕಿರಗಂದೂರು, ಸೋಮವಾರಪೇಟೆ (ತಾ), ಸರ್ಕಾರಿ ಪ್ರೌಢಶಾಲೆ, ತೊರೆನೂರು, ಸೋಮವಾರಪೇಟೆ (ತಾ), ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ, ಸೋಮವಾರಪೇಟೆ (ತಾ), ಸರ್ಕಾರಿ ಪ್ರೌಢಶಾಲೆ, ಬೆಸೂರು, ಸೋಮವಾರಪೇಟೆ (ತಾ), 7.ಸರ್ಕಾರಿ ಪ್ರೌಢಶಾಲೆ, ಮೂರ್ನಾಡು, ಮಡಿಕೇರಿ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ‘ಬಿ’ ಚೂರಿಕಾಡು, ವೀರಾಜ ಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಣಗೂರು, ಸೋಮವಾರಪೇಟೆ (ತಾ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಾಟೇಕಾಡು ಹೊದ್ದೂರು, ಮಡಿಕೇರಿ (ತಾ).