ಮಡಿಕೇರಿ, ಮಾ. 17: ಬೇಸಿಗೆಯ ಮಾರ್ಚ್, ಏಪ್ರಿಲ್ ತಿಂಗಳುಗಳಲ್ಲಿ ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಿಗೆ ಈಗಾಗಲೇ ಸುಡು ಬಿಸಿಲಿನ ತಾಪ ಏರಿದ್ದು, ಬಿಸಿಲಿನ ತಾಪದ ಜೊತೆಗೆ ನೀರಿನ ಸಮಸ್ಯೆ ಕಾಡುತ್ತಿದೆ. ಸರಕಾರದ ಹಲವಾರು ಯೋಜನೆಗಳ ಮಧ್ಯೆಯೂ ನೀರಿನ ಸಮಸ್ಯೆ ಉಲ್ಬಣವಾಗುವ ಎಲ್ಲಾ ಲಕ್ಷಣಗಳು ಇದೆ. ಆದ್ದರಿಂದ ತೋಟಗಾರಿಕಾ ಬೆಳೆಗಳ ಸಂರಕ್ಷಣೆಯ ನಿಟ್ಟಿನಲ್ಲಿ ಸಲಹೆ ನೀಡಲಾಗಿದೆ.

ಸಣ್ಣ ಪ್ರಮಾಣದ ನೀರಿನ ಬಳಕೆ ಕಾರ್ಯಕ್ರಮ ರೂಪಿಸುವದು. ಹಿಡುವಳಿ ಮಟ್ಟದಲ್ಲಿ ನೀರಿನ ಬಳಕೆಯ ಸಮರ್ಪಕತೆಯನ್ನು ಹೆಚ್ಚಿಸುವದು. ಸವಳು, ಜೌಗು ಮುಂತಾದವುಗಳಿಂದ ಜಮೀನು ಹಾಳಾಗದಂತೆ ಎಚ್ಚರ ವಹಿಸುವದು. ನೀರಿನ ಗುಣಮಟ್ಟ ಕಾಪಾಡಿಕೊಂಡು ಅಂತರ್ಜಲ ಕುಸಿಯದಂತೆ ನೋಡಿಕೊಳ್ಳುವದು.

ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಲು ಹನಿ ನೀರಾವರಿ ಯೋಜನೆ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಇದರ ಜೊತೆ ನೀರಿನ ತೀವ್ರತೆ, ಲಭ್ಯತೆ ಗಮನಿಸಿ ಮುಂದಿನ ಜೂನ್‍ವರೆಗೂ ನೀರಿನ ಬೇಡಿಕೆ ಅನುಸಾರ ಕಾರ್ಯೋನ್ಮು ಖರಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ರೈತರು ಇಲಾಖಾ ಕಚೇರಿಗಳಿಂದ ಮಾಹಿತಿ ಪಡೆಯಬಹುದು.