ಸುಂಟಿಕೊಪ್ಪ, ಮಾ. 17: ಸ್ವಚ್ಛತೆಯನ್ನು ಕಾಯ್ದುಕೊಂಡರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವೆಂದು ಡಾ. ಪ್ರಾಣೇಶ್ ಹೇಳಿದರು.

ಕಂಬಿಬಾಣೆ ಸುಭಾಷ್ ಯವಕ ಸಂಘದ ಕಚೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮಕ್ಕಳಿಂದ ಹಾಗೂ ಕಂಬಿಬಾಣೆ ಸುಭಾಷ್ ಯುವಕ ಸಂಘದ ವತಿಯಿಂದ ಜಂಟಿಯಾಗಿ ಆಯೋಜಿಸಲಾಗಿದ್ದ ಸ್ವಚ್ಛತೆ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಂಟಿಕೊಪ್ಪ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಂಬಿಬಾಣೆ ಸುಭಾಷ್ ಯವಕ ಸಂಘದ ಅಧ್ಯಕ್ಷ ಲವಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ 7ನೇ ಹೊಸಕೋಟೆ ಗ್ರಾ.ಪಂ. ಸದಸ್ಯ ಅಬ್ದುಲ್ ಕುಟ್ಟಿ , ಕಮಲ ನೆಹರೂ ಮಂಡಳಿ ಅಧ್ಯಕ್ಷೆ ಉಷಾ, ಅತ್ತೂರು-ನಲ್ಲೂರು ಶಾಲೆಯ ಶಿಕ್ಷಕ ಜನೂಲ್ ಅಹಮ್ಮದ್, ಕಂಬಿಬಾಣೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಸ್ಮ, ಪಂಚಾಯಿತಿ ಸದಸ್ಯೆ ಆಪ್ಸ, ಪತ್ರಕರ್ತ ಸಿ.ಎ. ಮೊೈದು, ಕಂಬಿಬಾಣೆ ಆರೋಗ್ಯ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.

ಜಾನವಿ ಸ್ವಾಗತಿಸಿ, ರೇಖಾ ನಿರೂಪಿಸಿ, ತುಳಸಿ ವಂದಿಸಿದರು.