*ಸಿದ್ದಾಪುರ, ಮಾ. 18: ಸಿದ್ದಾಪುರ ಸಮೀಪದ ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 50 ವರ್ಷಗಳಿಂದ ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಿದ್ದ ಪಂಚಾಯಿತಿಯ ಹಳೇ ಬೋರ್‍ವೆಲ್ ಕೆಟ್ಟು ನಿಂತಿದೆ. ಅಂತರ್ಜಲ ಕುಸಿತದ ಕಾರಣ ಹಳೆಯ ಬೋರ್‍ವೆಲ್‍ನಿಂದ ನೀರು ಬರುತ್ತಿರಲಿಲ್ಲ, ಈ ಕಾರಣ ಮರಗೋಡು ಪಟ್ಟಣದಲ್ಲಿ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.
ಗ್ರಾಮ ಪಂಚಾಯಿತಿ ಸದಸ್ಯ ಮುಂಡೋಡಿ ನಂದಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ನೂತನ ಕೊಳವೆ ಬಾವಿಗೆ ಸೂಚಿಸಿದ್ದರು.
500 ಅಡಿ ತಲಪುತ್ತಿದ್ದಂತೆ ನೀರು ಕೊಳವೆಯಿಂದ ಮೇಲೆ ಹಾರಿತು. ನೀರಿನ ಒಳ ಹರಿವು ಅಧಿಕಗೊಂಡು ಇದೀಗ ಬೋರ್‍ವೆಲ್‍ನಿಂದ ನೀರು ತಾನಾಗಿ ಮೇಲೆ ಹರಿಯುತ್ತಿದೆ.
ಬರಗಾಲದಲ್ಲಿಯೂ ಮರಗೋಡಿನ ನೂತನ ಕೊಳವೆ ಬಾವಿಯಿಂದ ನೀರು ಉಕ್ಕಿ ಹರಿಯುತ್ತಿರುವ ದೃಶ್ಯ ನೋಡಲು ಗ್ರಾಮಸ್ಥರು ಬರುತ್ತಿದ್ದಾರೆ.