ಮಡಿಕೇರಿ, ಮಾ. 18: ಕೊಡವ ಜನಾಂಗಕ್ಕೆ ಸಂವಿಧಾನ ಬದ್ಧ ರಕ್ಷಣೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು ಸಿಎನ್ಸಿ ಮುಖಂಡ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.
ವೀರಾಜಪೇಟೆ ಕಾರು ನಿಲ್ದಾಣದಲ್ಲಿ ತಾ. 15 ರಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಡವರ ಆಚಾರ-ವಿಚಾರ, ಪರಂಪರೆ ರಕ್ಷಣೆಗಾಗಿ ಸಂಘಟಿತ ಹೋರಾಟ ಅಗತ್ಯವೆಂದು ಪ್ರತಿಪಾದಿಸಿದರು.
ಸಂಘಟನೆ ಕಳೆದ 24 ವರ್ಷಗಳಿಂದ ನಡೆಸುತ್ತಾ ಬಂದಿರುವ ಹೋರಾಟ ಹಾಗೂ ಸರಕಾರದ ಮುಂದಿಟ್ಟಿರುವ ಬೇಡಿಕೆ ಕುರಿತು ಅವರು ವಿವರಿಸಿದರು. ವಿವಿಧ ಪ್ರಮುಖರು ಹಾಜರಿದ್ದರು.