ಮಡಿಕೇರಿ, ಮಾ. 18: ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕರಿಗೆ ಹೊಸ ಯೋಜನೆ ರೂಪಿಸಿದೆ.
ಆ ಸಂಸ್ಥೆಗೆ ಗ್ರಾಹಕರು ಮೊದಲು ತಮಗೆ ಸಾಧ್ಯವಾದ ಮೊತ್ತವನ್ನು ಮೊದಲೇ ಪಾವತಿಸಿದರೆ, ನಂತರ ಖರೀದಿಸುವ ಪೆಟ್ರೋಲ್ ಯಾ ಡೀಸೆಲ್ಗಳು ಪ್ರತಿ ಲೀಟರ್ಗೆ 65 ರಿಂದ 66 ಪೈಸೆ ಕಡಿಮೆ ದರದಲ್ಲಿ ಲಭ್ಯವಾಗಲಿದೆ.
ಆ ಸಂಸ್ಥೆಯ ಅರ್ಜಿ ತುಂಬಿ ಸದಸ್ಯರಾದ ಬಳಿಕ ಕಾರ್ಡ್ ಒಂದನ್ನು ನೀಡಲಾಗುವದು. ಇಂಧನ ಖರೀದಿ ಸಂದರ್ಭ ಹಣ ಪಾವತಿಸಿದರೆ ನಂತರ ಗ್ರಾಹಕರ ಬ್ಯಾಂಕಿಗೆ ತಲಾ ಲೀಟರ್ಗೆ 65 ರಿಂದ 66 ಪೈಸೆ ಜಮೆ ಆಗುವದು. ಈ ಬಗ್ಗೆ ಎಲ್ಲ Iಔಅ ಪೆಟ್ರೋಲ್ ಬಂಕ್ಗಳಲ್ಲಿ ಮಾಹಿತಿ ಪಡೆಯಬಹುದು.