ಕೂಡಿಗೆ, ಮಾ. 18: ಸಮೀಪ ಕಣಿವೆ ಗ್ರಾಮದ ಇಸ್ಮಾಯಿಲ್ ಎಂಬವರ ತೆರೆದ ಬಾವಿಗೆ ಚಿರತೆ ಮರಿಯೊಂದು ಬಿದ್ದಿದೆ ಎಂದು ಕುಟುಂಬದವರು ಹಾಗೂ ಸುತ್ತಮುತ್ತಲ ನಿವಾಸಿಗಳು ಹೆಬ್ಬಾಲೆ ಉಪವಲಯ ಅರಣ್ಯಾಧಿಕಾರಿ ಫಿರೋಜ್‍ಖಾನ್ ಅವರಿಗೆ ತಿಳಿಸಿದರು. ಅರಣ್ಯ ಸಿಬ್ಬಂದಿ ಗಣೇಶ್, ಮೋಹನ್, ಪೂವಪ್ಪ ಸಹಿತ ಸ್ಥಳಕ್ಕೆ ಆಗಮಿಸಿದರು.

ಉಪ ವಲಯ ಅರಣ್ಯ ಅಧಿಕಾರಿಗಳು ಅದರ ಅಪಾಯದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಬಲೆ ಮತ್ತಿತತ್ತರೆ ಸಾಧನಗಳನ್ನು ಬಳಸಿ ನೀರಿನಿಂದ ‘ಚಿರತೆ’ ಎಂದು ಭಾವಿಸಲ್ಪಟ್ಟ ಬೆಕ್ಕನ್ನು ಮೇಲೆ ತೆಗೆದರು.

ಮೈಮೇಲೆ ನೀರೆಲ್ಲ ಒಣಗಿದ ಮೇಲೆ ಫೋಟೋ ತೆಗೆದು ಮೇಲಧಿಕಾರಿಗೆ ವಿಷಯ ತಿಳಿಸಿದರು. ಅಲ್ಲಿಂದ ಬಂದ ಮಾಹಿತಿಯಂತೆ ಆ ಪ್ರಾಣಿ ಕಾಡು ಬೆಕ್ಕು ಚಿರತೆಯಲ್ಲ ಎಂದು ಖಾತರಿಯಾಗಿ ಬೆಕ್ಕನ್ನು ಯಡವನಾಡು ರಕ್ಷಿತಾರಣ್ಯಕ್ಕೆ ಬಿಡಲಾಯಿತು.