ವೀರಾಜಪೇಟೆ, ಮಾ. 19: ಚೆಂಬೆಬೆಳಿಯೂರು ಗ್ರಾಮದ ಕಲ್ಲುತಿರಿಕೆ ಈಶ್ವರ - ಪಾರ್ವತಿ ದೇವರ ಉತ್ಸವ ತಾ. 20 ರಿಂದ (ಇಂದಿನಿಂದ) ತಾ. 25 ರವರಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಚಾರಿಮಂಡ ಭಾನು ಬೋಪಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾ. 20 ರಂದು ರಾತ್ರಿ 7 ಗಂಟೆಗೆ ಭಂಡಾರ ಬರುವದು, ನಂತರ 8 ಕ್ಕೆ ಕೊಡಿಮರ, 8.30ಕ್ಕೆ ದೇವರ ಕಟ್ಟು, ರಾತ್ರಿ 9ಕ್ಕೆ ದೇವರು ಹೊರ ಬರುವದು ರಾತ್ರಿ 10ಕ್ಕೆ ಮಹಾಪೂಜಾ ಸೇವೆ, ಅನ್ನದಾನ ನಡೆಯಲಿದೆ ಎಂದರು.
ತಾ. 21 ಮತ್ತು 22 ರಂದು ನಿತ್ಯ ಪೂಜೆ, 8ಕ್ಕೆ ಕಲಶ ಪೂಜೆ, ಕಲಶಾಭಿಷೇಕ ಹಾಗೂ ಅಪರಾಹ್ನ 12ಕ್ಕೆ ಗಣಪತಿ ಪೂಜೆ, 1ಕ್ಕೆ ಮಹಾ ಪೂಜಾ ಸೇವೆ, ನಂತರ ಅನ್ನದಾನ ನಡೆಯಲಿದೆ.
ತಾ. 23 ರಂದು ದೊಡ್ಡ ಹಬ್ಬ ನಡೆಯಲಿದೆ. ಮುಂಜಾನೆ ನಿತ್ಯ ಸೇವೆಯೊಂದಿಗೆ 11 ಗಂಟೆಗೆ ಮಹಾಪೂಜೆ, ಕೊಡಿಮರ ಪೂಜೆ, ಎತ್ತು ಪೋರಾಟ, ತೆಂಗಿನ ಕಾÀಯಿಗೆ ಗುಂಡು ಹೊಡೆಯುವುದು, ಅನ್ನದಾನ ನಡೆಯಲಿದೆ. ಸಾಯಂಕಾಲ 4 ಗಂಟೆಯಿಂದ ದೇವರ ನೃತ್ಯ, ಸಂಜೆ 5ಕ್ಕೆ ದೇವರು ಬನಕ್ಕೆ ಹೋಗುವದು, ರಾತ್ರಿ 8 ಗಂಟೆಗೆ ವಸಂತ ಪೂಜೆ ನಂತರ 9ಕ್ಕೆ ಮಹಾಪೂಜೆ ಹಾಗೂ ಅನ್ನದಾನ ಜರುಗಲಿದೆ ಎಂದರು.
ತಾ. 24 ರಂದು ನಿತ್ಯ ಪೂಜೆ, ಕಲಶ ಪೂಜೆ, ಕಲಶಾಭಿಷೇಕ, ಅಪರಾಹ್ನ 12ಕ್ಕೆ ಮಹಾಪೂಜೆ ಹಾಗೂ ಅನ್ನದಾನನಡೆಯಲಿದೆ. ಸಂಜೆ ದೇವರು ಸ್ನಾನಕ್ಕೆ ಹೋಗುವದು, ದೇವರ ನೃತ್ಯ, ರಾತ್ರಿ 9ಕ್ಕೆ ಮಹಾಪೂಜೆ ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಂಡೇಪಂಡ ಡಾಲು ಮಾದಯ್ಯ, ಚೆಂಬಾಂಡ ರಂಜು ಭೀಮಯ್ಯ, ಸೋಮೆಯ್ಯಂಡ ಸಂಪತ್ ಹಾಗೂ ಕೊಳವಂಡ ಕಾರ್ಯಪ್ಪ ಉಪಸ್ಥಿತರಿದ್ದರು.