ಗೋಣಿಕೊಪ್ಪಲು, ಮಾ. 19: ನ್ಯೂನತೆಗಳನ್ನು ಮೂಢ ನಂಬಿಕೆಯಾಗಿ ಅರ್ಥೈಸಿಕೊಳ್ಳುವದಕ್ಕಿಂತ ನ್ಯೂನತೆ ಸರಿ ಪಡಿಸುವತ್ತ ಕುಟುಂಬಸ್ಥರು ಗಮನ ಹರಿಸಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು.
ವಿಕಲಚೇತನರಿಗೆ ಸರ್ಕಾರದಿಂದ ಅಂಗವಿಕಲ ಚೀಟಿ ನೀಡುವ ಉದ್ದೇಶದಿಂದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ವಿಕಲಚೇತ ನರಿಗಾಗಿ ಇಲ್ಲಿನ ಆರ್‍ಎಂಸಿ ಸಭಾಂಗಣದಲ್ಲಿ ನಡೆದ ವೈದ್ಯಕೀಯ ತಪಾಸಣಾ ಶಿಬಿರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ದರು. ಅಂಗ ವೈಖಲ್ಯತೆ ಶಾಪ ಎಂಬ ಮೂಢ ನಂಬಿಕೆ ಇಂದು ಇದೆ. ನ್ಯೂನತೆಗಳನ್ನು ಮೂಡ ನಂಬಿಕೆಯಾಗಿ ಅರ್ಥೈಸಿಕೊಳ್ಳುವ ದಕ್ಕಿಂತ ನ್ಯೂನತೆ ಸರಿ ಪಡಿಸುವತ್ತ ಕುಟುಂಬಸ್ಥರು ಗಮನ ಹರಿಸಬೇಕು ಎಂದರು.
ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ನವೀನ್ ಮಾತನಾಡಿ, ಅಂಗವೈಖಲ್ಯತೆ ಇರುವವರ ಬಗ್ಗೆ ಅನುಕಂಪ ತೋರಿಸುವದಕ್ಕಿಂತ ಅವರಿಗೆ ಆಧಾರ ವಾಗುವ ನಿರ್ಧಾರಗಳನ್ನು ಕುಟುಂಬ ಸ್ಥರು ತೆಗೆದುಕೊಳ್ಳುವ ಮೂಲಕ ವಿಕಲತೆ ಇರುವವರ ಜೀವನಕ್ಕೆ ಆಧಾರವಾಗಬೇಕು ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಸುಮಾರು 90 ಫಲಾನುಭವಿಗಳು ಪಾಲ್ಗೊಂಡರು. ಇಎನ್‍ಟಿ ತಜ್ಞ ಡಾ. ಮಂಜುನಾಥ್ ಪ್ರಸಾದ್, ಕೀಲು ಹಾಗೂ ಮೂಳೆ ತಜ್ಞ ಡಾ. ಹರೀಶ್, ಫಿಜಿಸಿಯೆನ್ ಡಾ. ಲೋಕೇಶ್, ಮಾನಸಿಕ ರೋಗ ತಜ್ಞ ಡಾ. ಸತೀಶ್, ಕ್ಲಿನಿಕಲ್ ಸೈಕಲೋಜಿಸ್ಟ್ ನವೀನ್ ರೇ, ಆಡಿಯಾಲಜಿಸ್ಟ್ ಪಂಚಮ್ ಪೊನ್ನಣ್ಣ ತಪಾಸಣೆ ನಡೆಸಿದರು.
ಅಂಗವಿಕಲತೆ ಆಧಾರದಲ್ಲಿ ಅಂಗವಿಕಲ ಚೀಟಿ ವಿತರಿಸಲು ಮೂಳೆ, ಮಾನಸಿಕ, ಫಿಸಿಸಿಯನ್, ನೇತ್ರ ಹಾಗೂ ಇಎನ್‍ಟಿ ತಜ್ಞರಿಂದ ವಿಕಲತೆಯ ತಪಾಸಣೆ ನಡೆಯಬೇಕಾ ಗಿರುವದರಿಂದ ಒಂದೇ ವೇದಿಕೆಯಲ್ಲಿ ಎಲ್ಲಾ ವಿಧಗಳ ವೈದ್ಯರು ಲಭ್ಯವಾದ ಕಾರಣ ವಿಕಲತೆ ಹೊಂದಿರುವ ಕುಟುಂಬಸ್ಥರಿಗೆ ಅನುಕೂಲ ವಾಯಿತು.
ಈ ಸಂದರ್ಭ ವಿರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಹ್ಮಣಿ, ಗೋಣಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುವಿನ್ ಗಣಪತಿ ಉಪಸ್ಥಿತರಿದ್ದರು. ಲಾಲಾ ಭೀಮಯ್ಯ ಸ್ವಾಗತಿಸಿದರು.