ಸುಂಟಿಕೊಪ್ಪ, ಮಾ. 19: ಇಲ್ಲಿಗೆ ಸಮೀಪದ ಮಾದಾಪುರದ ಕುಂಬೂರು ಬಳಿ ಮನೆಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರ ಬಳಕೆಗಾಗಿ ಟಿಪ್ಪರ್ ಲಾರಿಯ ಮೂಲಕ ಕಾಂಕ್ರೀಟನ್ನು ನೆಲಕ್ಕೆ ಸುರಿಯುತ್ತಿದ್ದ ಸಂದರ್ಭ, ಭಾರ ತಡೆದುಕೊಳ್ಳದೆ ಆಯ ತಪ್ಪಿ ರಸ್ತೆಗೆ ಮಗುಚಿಕೊಂಡ ಘಟನೆ ನಡೆದಿದೆ. ದುರದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.