ಮಡಿಕೇರಿ, ಮಾ. 27: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶ್ರೀನರೇಂದ್ರಮೋದಿ ರೈತ ಸಹಕಾರ ಭವನದ ಅನ್ನದಾತ ಸಭಾಂಗಣ ಉದ್ಘಾಟನಾ ಸಮಾರಂಭ ತಾ.29 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಬಲ್ಲಾರಂಡ ಮಣಿಉತ್ತಪ್ಪ, ತಾ.29 ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಅನ್ನದಾತ ಸಭಾಂಗಣವನ್ನು ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸಲಿದ್ದು, ದಾನಿಗಳ ಹೆಸರಿನ ಫಲಕಗಳನ್ನು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ವಿಧಾನಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅನಾವರಣಗೊಳಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಿ.ಡಿ.ಮಂಜುನಾಥ್, ಉಪಾಧ್ಯಕ್ಷರಾದ ಕೆ.ಎಸ್. ಹರೀಶ್ ಪೂವಯ್ಯ, ನಿರ್ದೇಶಕ ಎಂ.ಎನ್.ಕುಮಾರಪ್ಪ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಕೆ.ಪಿ.ಗಣಪತಿ, ಕುಶಾಲನಗರ ಎಪಿಎಂಸಿ ಉಪಾಧ್ಯಕ್ಷ ಸಿ.ಪಿ.ವಿಜಯ, ಸಹಕಾರ ಸಂಘಗಳ ಉಪ ನಿಬಂಧಕರಾದ ಜಿ.ಆರ್. ವಿಜಯಕುಮಾರ್, ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಹೆಚ್.ಎಸ್.ತಿಮ್ಮಪ್ಪಯ್ಯ ವಹಿಸಲಿದ್ದು, ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹೆಚ್.ಟಿ.ಅನಿಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಕೀಲರಾದ ಮೋಹನ್‍ಕುಮಾರ್, ಪತ್ರಕರ್ತರಾದ ಅಂಚೆಮನೆ ಸುಧಿ, ಕರುಣ್ ಕಾಳಯ್ಯ, ಲೆಕ್ಕ ಪರಿಶೋಧಕ ಹೆಚ್.ಬಿ.ರಮೇಶ್, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕೆÀ್ಷ ಮೇರಿ ಅಂಬುದಾಸನ್, ಗ್ರಾ.ಪಂ ಸದಸ್ಯರುಗಳಾದ ಎನ್.ಎಸ್.ರವಿ, ದೇವಯಾನಿ, ಮಾಲಾಶ್ರೀ, ಧನುದೇವಯ್ಯ ಹಾಗೂ ಸೀತಮ್ಮ ಉಪಸ್ಥಿತರಿರುವರು ಎಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕೊಯನಾಡು ಗ್ರಾಮದ ದೀಪಕ್ ಜಾನಪದ ಕಲಾ ಬಳಗದಿಂದ ಪೌರಾಣಿಕ ಯಕ್ಷಗಾನ ಪ್ರಸಂಗ ಶ್ರೀಕೃಷ್ಣ ಲೀಲೆ-ಕಂಸವಧೆ ಪ್ರದರ್ಶನಗೊಳ್ಳಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಹೆಚ್.ಎಸ್.ತಿಮ್ಮಪ್ಪಯ್ಯ ನಿರ್ದೇಶಕರುಗಳಾದ ಕೆ.ಕೆ.ಪೂವಯ್ಯ ಹಾಗೂ ಎಂ.ಎಸ್.ಉಲ್ಲಾಸ್ ಉಪಸ್ಥಿತರಿದ್ದರು.