ಗೋಣಿಕೊಪ್ಪಲು, ಮಾ. 27: ಇಲ್ಲಿನ ಕಾಫಿ ಮಂಡಳಿ ವಿಸ್ತರಣಾ ವಿಭಾಗದಿಂದ ಕಾಫಿ ಬೆಳೆಗಾರರಿಗೆ ತಾಂತ್ರಿಕ ವಿಚಾರ ಅಧಿವೇಶನ ಕಾರ್ಯಕ್ರಮವನ್ನು ತಾ. 31 ರಂದು ಕುಂದ ಗ್ರಾಮದ ಕೈಮುಡ್ಕೆ ಬಾಣೆಯಲ್ಲಿ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಬೆ. 10.30 ಕ್ಕೆ ಮಣ್ಣು ಪರೀಕ್ಷೆ ಆಧಾರದಂತೆ ಸುಣ್ಣ ಬಳಸುವ ವಿಧಾನ, ರಾಸಾಯನಿಕ ಗೊಬ್ಬರ ನೀಡುವ ವಿಧಾನ, ಬೇರು ರೋಗದ ನಿಯಂತ್ರಣಕ್ಕೆ ರೋಗದ ನಿಯಂತ್ರಣ, ಬೆರ್ರಿ ಬೋರರ್ ನಿಯಂತ್ರಣಕ್ಕೆ ಟ್ರ್ಯಾಪ್ ಬಳಕೆ, ಮಿಶ್ರ ಬೆಳೆ ಮೂಲಕ ನಷ್ಟ ಉಂಟಾಗದಂತೆ ಹೆಚ್ಚು ಇಳುವರಿ ವಿಧಾನಗಳ ಬಗ್ಗೆ ಸಲಹೆ ನೀಡಲಿದ್ದಾರೆ.ಕಾಫಿ ಮಂಡಳಿ ಜಂಟಿ ನಿರ್ದೇಶಕ ಹೇಮಂತ್ ಕುಮಾರ್, ಸ್ಥಳೀಯ ಕಾಫಿ ಬೆಳೆಗಾರ ಟಿ ಎಂ ಕುಶಾಲಪ್ಪ, ಕಾಫಿ ಮಂಡಳಿ ಸದಸ್ಯರುಗಳಾದ ಬೊಟ್ಟಂಗಡ ರಾಜು, ಮಚ್ಚಮಾಡ ಡಾಲಿ ಚೆಂಗಪ್ಪ, ರೀನಾ ಪ್ರಕಾಶ್, ಅಭಿಮನ್ಯುಕುಮಾರ್, ಜಿ ಎಲ್ ನಾಗರಾಜು, ಉಪ ನಿರ್ದೇಶಕ ಸತೀಶ್ ಚಂದ್ರ ಹಾಗೂ ಹಿರಿಯ ಸಂಪರ್ಕಾಧಿಕಾರಿ ಎಸ್ ಬಿ ರಮೇಶ್ ಪಾಲ್ಗೊಳ್ಳಲಿದ್ದಾರೆ.