ಮಡಿಕೇರಿ, ಮಾ.29: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಅಬಕಾರಿ ಇಲಾಖಾ ಕಟ್ಟಡÀವು ಪಾಳು ಬಿದ್ದಿದ್ದು, ಈ ಕಟ್ಟಡದಲ್ಲಿ ಅನೈತಿಕ ಚುಟುವಟಿಕೆಗಳು ನಡೆಯು ತ್ತಿವೆ. ಗ್ರಾಮದಲ್ಲಿ ಅಶಾಂತಿಯ ವಾತಾವರಣಕ್ಕೂ ಇದು ಎಡೆಯಾಗಿದ್ದು, ಉಳಿಕೆ ಕಾಮಗಾರಿ ಪೂರ್ಣಗೊಳಿಸಿ ಕಚೇರಿ ಪ್ರಾರಂಭಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರು ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಲೋಕೋಪಯೋಗಿ ಬಂದು ಮತ್ತು ಒಳನಾಡು ಜಲಸಾರಿಗೆ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಅವರು ಕೊಡಗು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 7 ಕಿ.ಮೀ. ದೂರದ ಕೆ. ನಿಡುಗಣೆ ಗ್ರಾಮದಲ್ಲಿ ಜಿಲ್ಲಾ ಅಬಕಾರಿ ಭವನ ನಿರ್ಮಾಣವನ್ನು 2009ನೇ ಸಾಲಿನಲ್ಲಿ ರೂ. 70 ಲಕ್ಷಗಳ ಅನುದಾನದಲ್ಲಿ ಕೈಗೊಂಡು ಕಟ್ಟಡ ನಿರ್ಮಾಣವನ್ನು ಮುಕ್ತಾಯ ಗೊಳಿಸಲಾಗಿದೆ.

ಪ್ರಧಾನ ವಾಸ್ತುಶಿಲ್ಪಿಗಳ ಅನುಮೋದಿತ ನಕ್ಷೆಯನ್ವಯ ಕಟ್ಟಡವು ನೆಲಮಹಡಿ ಮತ್ತು ಎರಡು ಅಂತಸ್ತಿನ ಕಟ್ಟಡವಾಗಿದ್ದು, ಅನುದಾನಕ್ಕನು ಗುಣವಾಗಿ ನೆಲ ಅಂತಸ್ತು ಮಾತ್ರ ನಿರ್ಮಾಣಗೊಂಡಿದೆ. ಹಾಲಿ ನೆಲ ಅಂತಸ್ತು ವಾಹನ ನಿಲುಗಡೆ ಮತ್ತು ಅಬಕಾರಿ ವಸ್ತುಗಳ ಶೇಖರಣೆಗಾಗಿ ಉದ್ದೇಶಿಸಲಾಗಿದೆ. ಮೊದಲನೇ ಮತ್ತು ಎರಡನೇ ಅಂತಸ್ತುಗಳ ಕಾಮಗಾರಿ ಯನ್ನು ಕೈಗೊಳ್ಳುವ ಸಂಬಂಧ ಸರ್ಕಾರದ

(ಮೊದಲ ಪುಟದಿಂದ) ಅನುದಾನವನ್ನು ನಿರೀಕ್ಷಿಸಿರುವದಾಗಿ ಅಬಕಾರಿ ಅಧೀಕ್ಷಕರು ತಿಳಿಸಿದ್ದಾರೆ. ಇದಾಗದೆ ಅಬಕಾರಿ ಭವನದ ನೆಲ ಅಂತಸ್ತು ಕಟ್ಟಡವನ್ನು ಇಲಾಖೆಯ ಹಸ್ತಾಂತರಕ್ಕೆ ಪಡೆಯಲು ಸಾಧ್ಯವಾಗುವದಿಲ್ಲವೆಂದು, ಅನುದಾನ ಬಿಡುಗಡೆಯ ನಂತರ ನೀಲಿ ನಕ್ಷೆಯಂತೆ ನೆಲ ಅಂತಸ್ತು, ಮೊದಲನೇ ಅಂತಸ್ತು ಹಾಗೂ ಎರಡನೇ ಅಂತಸ್ತುಗಳನ್ನು ಪೂರ್ಣಗೊಳಿಸಿದ ನಂತರವೇ ಅಬಕಾರಿ ಭವನವನ್ನು ಇಲಾಖೆಗೆ ಹಸ್ತಾಂತರಿಸಿ ಕೊಳ್ಳಲಾಗುವದು ಎಂದಿದ್ದು, ಸದರಿ ಕಟ್ಟಡವು ಕಳೆದ 6 ವರ್ಷಗಳಿಂದ ಬಳಕೆಯಲ್ಲಿ ಇರುವದಿಲ್ಲ ಎಂದು ತಿಳಿಸಿದರು.

ಮೊದಲನೇ ಮತ್ತು ಎರಡನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅಂದಾಜು ರೂ. 330 ಲಕ್ಷ ಅನುದಾನದ ಅವಶ್ಯಕತೆ ಇದೆ. ಉಪಯೋಗಿನ ಇಲಾಖೆಯಾದ ಆರ್ಥಿಕ ಇಲಾಖೆ (ಅಬಕಾರಿ)ಯ ಬೇಡಿಕೆಯಂತೆ ಬಂಡವಾಳ ಲೆಕ್ಕ ಶೀರ್ಷಿಕೆ 4039ರಡಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿಲ್ಲವಾದ್ದರಿಂದ, ಸದರಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಕೈಗೊಳ್ಳಲು ಆರ್ಥಿಕ ಇಲಾಖೆಯು ಕೋರಿರುತ್ತದೆ. ಅದರಂತೆ ಮುಂದಿನ ಸಾಲಿನ ಅಂದರೆ 2017-18ನೇ ಸಾಲಿನ ಹೊಸ ಕಾಮಗಾರಿಗಳ ಅಪೆಂಡಿಕ್ಸ್-ಇನಲ್ಲಿ ಲೆಕ್ಕಶೀರ್ಷಿಕೆ 4059 ರಡಿಯಲ್ಲಿ ರೂ. 330 ಲಕ್ಷಗಳ ಅನುದಾನ ಒದಗಿಸುವ ಮೂಲಕ ಸೇರ್ಪಡೆಗೊಳಿಸಿ, ಕಾಮಗಾರಿಯನ್ನು ಕೈಗೊಳ್ಳಲು ಪರಿಶೀಲಿಸಲಾಗುವದು ಎಂದು ಸಚಿವರು ತಿಳಿಸಿದರು.

ಅಬಕಾರಿ ಕಟ್ಟಡ ಪೂರ್ಣಗೊಳಿಸಲು ಕೆ.ಜಿ.ಬಿ. ಆಗ್ರಹ