ಮಡಿಕೇರಿ, ಮಾ. 29: ಕೊಡವ ಮಕ್ಕಡ ಕೂಟದಿಂದ ಎಡಮ್ಯಾರ್ ಒಂದನ್ನು (ಏಪ್ರಿಲ್14) ಈ ವರ್ಷ ಚೌರೀರ ಕುಟುಂಬದ ಮುಂದ್ ಮನೆಯಲ್ಲಿ ನಡೆಸಲು ಕೂಟದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೊಡವರ ನೂತನ ವರ್ಷದ ಮೊದಲ ದಿನವಾದ ಎಡಮ್ಯಾರ್ ಒಂದನ್ನು ಕೊಡವ ಮಕ್ಕಡ ಕೂಟವು ಕೊಡಗಿನ ನಾನಾ ಕಡೆ ಹಲವು ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದು, ಈ ವರ್ಷ ಮಡಿಕೇರಿ ತಾಲೂಕು ಹೊದ್ದೂರಿನ ಚೌರೀರ ಕುಟುಂಬದ ಮುಂದ್ ಮನೆಯಲ್ಲಿ ಏರ್ಪಡಿಸಲಾಗಿದೆ. ಏಪ್ರಿಲ್ 14ರ ಬೆಳಿಗ್ಗೆ ಕುಟುಂಬದ ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ದೇವರಿಗೆ ಅಕ್ಕಿ ಹಾಕಿ ಚೌರೀರ ಕುಟುಂಬದ ಗದ್ದೆಯಲ್ಲಿ ಕೊಡವ ಸಂಪ್ರದಾಯದೊಂದಿಗೆ ಪೂಜೆ ಸಲ್ಲಿಸಿ ಎತ್ತ್ ಕಟ್ಟಿ ಉಳುವದು ನಂತರ, ಪೂರ್ವಾಹ್ನ 10.30 ಗಂಟೆಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವÀರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅತಿಥಿಗಳಾಗಿ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಚೌರೀರ ಕುಟುಂಬದ ಅಧ್ಯಕ್ಷ ಚೌರೀರ ಕೆ.ಪೂವಯ್ಯ, ಹಿರಿಯರಾದ ಚೌರೀರ ಎಸ್. ಉತ್ತಪ್ಪ, ಪೊಮ್ಮಕ್ಕಡ ಒಕೂಟದ ಅಧ್ಯಕ್ಷೆ ಚೌರೀರ ಕಾವೇರಮ್ಮ ಪೂಣಚ್ಚ ಹಾಗೂ ಎಡಮ್ಯಾರ್ ಒಂದರ ಬಗ್ಗೆ ಚೌರೀರ ಎಸ್. ಉದಯ ವಿಚಾರ ಮಂಡನೆ ಮಾಡಲಿರುವರು.
ಮುಂದಿನ ದಿನಗಳಲ್ಲಿ ಕೂಟದಿಂದ ಆಟ್ ಪಾಟ್ ಪಡಿಪು ಕಾರ್ಯಕ್ರಮ ನಡೆಸುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಈ ಕುರಿತ ಸಭೆಯಲ್ಲಿ ಬಾಳೆಯಡ ಪ್ರತೀಶ್ ಪೂವಯ್ಯ, ಪುತ್ತರಿರ ಕಾಳಯ್ಯ, ಅಮ್ಮಾಟಂಡ ಬೋಪಣ್ಣ, ಪೊನ್ನೋಲತಂಡ ವಿನೋದ್, ಮಡ್ಲಂಡ ಮೋನಿಶ್, ಚೊಟ್ಟೆಯಂಡ ಕಾರ್ಸನ್ ಮುತ್ತಪ್ಪ, ಕೇಲೇಟಿರ ದೇವಯ್ಯ, ಉದಿಯಂಡ ಜಯಂತಿ, ಮೇವಡ ರಾಯ್ ಪೊನ್ನಣ್ಣ ಹಾಜರಿದ್ದರು.