ಸೋಮವಾರಪೇಟೆ, ಮಾ. 29: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಉತ್ಸವಗಳಲ್ಲಿ ಒಂದಾದ ಯುಗಾದಿ ಪ್ರಯುಕ್ತ ಸಮೀಪದ ಬಜೆಗುಂಡಿ ಗ್ರಾಮದಲ್ಲಿ ಆರ್‍ಎಸ್‍ಎಸ್ ಸ್ವಯಂ ಸೇವಕರು ಪಥಸಂಚಲನ ನಡೆಸಿದರು.

ಬೇಳೂರು ಮಂಡಲ ವ್ಯಾಪ್ತಿಯ ನೂರಾರು ಸ್ವಯಂಸೇವಕರು ಬಳಗುಂದ ಗ್ರಾಮದ ಗಣಪತಿ ದೇವಾಲಯದಿಂದ ಬಜೆಗುಂಡಿ ಮುಖ್ಯ ಮಾರ್ಗದಲ್ಲಿ ಸಾಗಿ ಕಕ್ಕೆಹೊಳೆ ಸಮೀಪದ ಮುತ್ತಪ್ಪ ದೇವಾಲಯದವರೆಗೆ ಪಥಸಂಚಲನ ಮಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಕಾರ್ಯವಾಹ ಪದ್ಮನಾಭ್ ಸೇರಿದಂತೆ ಇತರ ಪ್ರಮುಖರು ಭಾಗವಹಿಸಿದ್ದರು. ತಾ. 3ರಂದು ಸೋಮವಾರಪೇಟೆ ನಗರದಲ್ಲಿ ಪಥ ಸಂಚಲನ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಈಗಾಗಲೇ ಕೊಡ್ಲಿಪೇಟೆಯಲ್ಲಿ ಬೈಕ್ ಜಾಥಾ, ಮಾದಾಪುರದಲ್ಲಿ ಹಾಗೂ ಬಜೆಗುಂಡಿಯಲ್ಲಿ ಪೂರ್ಣ ಗಣವೇಶದೊಂದಿಗೆ ಪಥಸಂಚಲನ ನಡೆಸಲಾಗಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.