ನಾಪೋಕ್ಲು, ಮಾ. 29: ಕಾಸರಗೋಡಿನಲ್ಲಿ ಹತ್ಯೆಯಾದ ರಿಯಾಜ್ ಮುಸ್ಲಿಯಾರ್ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವದಾಗಿ ಮಾಜಿ ಸಚಿವ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಚೆರ್ಕಳ ಅಬ್ದುಲ್ಲಾ ತಿಳಿಸಿದ್ದಾರೆ.
ನಾಪೋಕ್ಲು ಸಮೀಪ ಹೊದವಾಡದಲ್ಲಿರುವ ರಿಯಾಜ್ ಕುಟುಂಬವನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಫ್ಯಾಸಿಸ್ಟ್ ಶಕ್ತಿಗಳಿಂದ ಹತ್ಯೆಯಾದ ರಿಯಾಜ್ ಕುಟುಂಬ ಬಡತನದಲ್ಲಿದ್ದು, ಈ ಕುಟುಂಬವನ್ನು ಸಂರಕ್ಷಿಸಲು ಪಕ್ಷದ ಎಲ್ಲಾ ಪದಾಧಿಕಾರಿಗಳು ಸೇರಿ, ಕುಟುಂಬದ ಭೇಟಿಗೆ ಆಗಮಿಸಿರುವದಾಗಿ ತಿಳಿಸಿದರು. ರಿಯಾಜ್ ಕುಟುಂಬಕ್ಕೆ ಸ್ವಂತವಾಗಿ ಮನೆ ಇಲ್ಲದಿರುವದರಿಂದ ಸೂಕ್ತ ಜಾಗವನ್ನು ಖರೀದಿ ಮಾಡಿ, ಮನೆ ನಿರ್ಮಿಸಲು ಮುಂದಾಗಿದ್ದೇವೆ. ಅಲ್ಲದೆ ಮನೆ ನಿರ್ಮಾಣದ ಹೆಸರಿನಲ್ಲಿ ಯಾರೂ ಸಹ ಹಣ ಸಂಗ್ರಹದಲ್ಲಿ ತೊಡಗಬೇಡಿ ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಖಮರುದ್ದೀನ್, ಹೊದವಾಡ ಗ್ರಾ.ಪಂ. ಸದಸ್ಯ ಹಂಸ, ಐಯುಎಮ್‍ಎಲ್ ಪಕ್ಷದ ಪ್ರಮುಖರು, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ ಹಾಗೂ ಮತ್ತಿತರರು ಇದ್ದರು.
- ದುಗ್ಗಳ ಸದಾನಂದ