ಮಡಿಕೇರಿ ಮಾ. 29 : ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ, ದೇವರ ನೃತ್ಯ ಬಲಿ ಹಾಗೂ ಕೋಲಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮ ದೇವತೆ ಶ್ರೀ ಭಗವತಿ ದೇವರ ಉತ್ಸವ ವಿವಿಧ ಪÀÇಜಾ ಕಾರ್ಯ, ಕೊಡಗಿನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಬೊಳಕಾಟ್, ಎತ್ತು ಪೋರಾಟಗಳೊಂದಿಗೆ ಆಚರಿಸಲ್ಪಟ್ಟಿತು.
ತೆಂಗಿನ ಕಾಯಿಗಳಿಗೆ ಗುಂಡು ಒಡೆಯುವ ಮೂಲಕ ಹಬ್ಬದ ಕಟ್ಟನ್ನು ಮುರಿಯಲಾಯಿತು. ನಂತರÀ ತೆಂಗಿನ ಕಾಯನ್ನು ಪರಸ್ಪರ ಸೆಳೆಯುವ ‘ತೆಂಗೆ ಪೋರ್’ ಕ್ರೀಡೆ ಗಮನ ಸೆಳೆಯಿತು. ಮಧ್ಯಾಹ್ನ ದೇವರ ದರ್ಶನ ಬಲಿ ಕಾರ್ಯಕ್ರಮ, ಮುಡಿ ಕೋಲ, ಅಯ್ಯಪ್ಪ, ಅಜ್ಜಪ್ಪ, ಕುಟ್ಟಿಚಾತ ಕೋಲಗಳ ಪ್ರದಕ್ಷಿಣೆ ನಡೆಯಿತು. ದೇವಸ್ಥಾನದಲ್ಲಿ ದೇವರ ಬಲಿ, ಕಲಶ ಪೂಜೆಗಳೊಂದಿಗೆ ಉತ್ಸವಕ್ಕೆ ತೆರೆ ಬಿತ್ತು. ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಕುಶಾಲನಗರ : ಕುಶಾಲನಗರ ಸಮೀಪದ ಬೈಲುಕೊಪ್ಪ ಗ್ರಾಮದ ಬಣಜಿಗ (ಬಲಿಜ) ಯುವಕ ಸಂಘದ ಆಶ್ರಯದಲ್ಲಿ 7ನೇ ವರ್ಷದ ಶ್ರೀ ಬಸವೇಶ್ವರ ಮತ್ತು ದೊಡ್ಡಮ್ಮ ತಾಯಿ ಉತ್ಸವ ನಡೆಯಿತು.
ಯುಗಾದಿ ಅಂಗವಾಗಿ ಪ್ರತಿ ವರ್ಷದಂತೆ ಕೊಪ್ಪ ಕಾವೇರಿ ಸೇತುವೆ ಬಳಿಯಿಂದ ಬೈಲುಕೊಪ್ಪ ವರೆಗೆ ಅಲಂಕೃತ ರಥದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಡೊಳ್ಳು ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಯಿತು. ಯುವಕ ಸಂಘದ ಪದಾಧಿಕಾರಿಗಳು ಇದ್ದರು.
ಈಚೂರು ದಬ್ಬೇಚಮ್ಮ ದೇವರ ಉತ್ಸವ
ಮಡಿಕೇರಿ : ಪೊನ್ನಂಪೇಟೆ ಸಮೀಪದ ಈಚೂರು ಗ್ರಾಮದ ಶ್ರೀ ಪಡುವೇರಿ ದಬ್ಬೇಚಮ್ಮ ದೇವರ ವಾರ್ಷಿಕ ಉತ್ಸವವು ತಾ. 24 ರಿಂದ ಕೊಡಿಮರ ಏರಿಸುವದರೊಂದಿಗೆ ಆರಂಭಗೊಂಡಿದ್ದು, ಏಪ್ರಿಲ್ 2ರಂದು ನೆರಪು, 3ರಂದು ದೇವರ ದರ್ಶನ, ದೇವ ಜಳಕ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.
* ಕಿರುಗೂರು ಉತ್ಸವ : ಕಿರುಗೂರು ಶ್ರೀ ಮಹಾದೇವರ ವಾರ್ಷಿಕೋತ್ಸವವು ಏ. 3 ರಿಂದ 6ರ ವರೆಗೆ ನಡೆಯಲಿದೆ. ಮೊದಲ ದಿನ ಗಣಹೋಮ, ಕೊಡಿಮರ, ವಿಶೇಷ ಪೂಜೆಯೊಂದಿಗೆ 4ರಂದು ಇರುಬೆಳಕು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಏ. 5ರಂದು ವಿಶೇಷ ಪೂಜೆಗಳೊಂದಿಗೆ ಅನ್ನದಾನ, ಅವಭೃತಸ್ನಾನ, ಕೊಡಿಮರ ಇಳಿಸುವದು ಹಾಗೂ ಏ. 6ರಂದು ನವಕಲಶ ಪೂಜೆ, ಭಂಡಾರ ಕಟ್ಟುವದು ಸಹಿತ ವಾರ್ಷಿಕ ಮಹಾಪೂಜೆಗೆ ತೆರೆ ಬೀಳಲಿದೆ.