ಗೋಣಿಕೊಪ್ಪಲು, ಮಾ. 29: ಕಾಡಾನೆ ಧಾಳಿಗೆ ತುತ್ತಾಗಿ ಸಾವಿಗೀಡಾದ ಗೋಣಿಕೊಪ್ಪಲು ಕಾಲೇಜು ವಿದ್ಯಾರ್ಥಿನಿ ಸಫಾನ ಮನೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹಾಗೂ ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಸಾಂತ್ವನ ಹೇಳಿದರು.

ಭೇಟಿ ಸಂದರ್ಭ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಕೆ. ಪೆÇನ್ನಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್. ಪ್ರಕಾಶ್, ಉಸ್ತುವಾರಿ ಸಚಿವರ ಆಪ್ತ ಕದ್ದಣಿಯಂಡ ಹರೀಶ್ ಬೋಪಣ್ಣ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ, ಕಾಂಗ್ರೆಸ್ ಪ್ರಮುಖ ಮೂಕಳಮಾಡ ಬೆಳ್ಳಿಯಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಸಲಾಂ, ಜಿಲ್ಲಾ ಉಪಾಧ್ಯಕ್ಷ ಹ್ಯಾರಿಸ್, ತಿತಿಮತಿ ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ, ತಾ.ಪಂ. ಸದಸ್ಯೆ ಆಶಾಜೇಮ್ಸ್ , ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮುಂತಾದವರು ಇದ್ದರು.

ತಾರಿಕಟ್ಟೆ ವಿದ್ಯಾರ್ಥಿಗಳಿಗೆ ತುರ್ತು ಶಾಲಾ-ಕಾಲೇಜಿಗೆ ತೆರಳಲು ವಾಹನ ವ್ಯವಸ್ಥೆ, ದಂತ ಕಳೆದುಕೊಂಡಿರುವ ಪುಂಡಾನೆಯ ಸೆರೆ, ತಾರಿಕಟ್ಟೆ ರಸ್ತೆ ಅಗಲೀಕರಣ ಒಳಗೊಂಡಂತೆ ಇಲ್ಲಿನ ಜನತೆಯ ಬೇಡಿಕೆಗಳಿಗೆ ಸ್ಪಂದಿಸುವದಾಗಿ ಇದೇ ಸಂದರ್ಭ ವೀಣಾ ಅಚ್ಚಯ್ಯ ಭರವಸೆ ನೀಡಿದರು.