ಸೋಮವಾರಪೇಟೆ, ಮಾ.29: ಸಮೀಪದ ಗೌಡಳ್ಳಿ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2016-17ನೇ ಸಾಲಿನ ಯು.ಕೆ.ಜಿ. ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.

ಯು.ಕೆ.ಜಿ. ವಿದ್ಯಾಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿ.ಸಿ.ಎ. ಮತ್ತು ಇ.ಸಿ.ಎ. ಚಟುವಟಿಕೆಗಳ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸದಸ್ಯ ಬಿ.ಎಂ.ಸುರೇಶ್, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ. ಪರಮೇಶ್, ಆಡಳಿತ ಮಂಡಳಿ ಕಾರ್ಯದರ್ಶಿ ವಿ.ಎನ್. ನಾಗರಾಜು, ನಿರ್ದೇಶಕರುಗಳಾದ ಎಚ್.ಆರ್. ಮುತ್ತಣ್ಣ, ಎಚ್.ಈ. ಪುಟ್ಟಸ್ವಾಮಿ, ವೀರಭದ್ರಪ್ಪ, ಪ್ರಾಂಶುಪಾಲ ಎಂ.ಗಣೇಶ್ ಉಪಸ್ಥಿತರಿದ್ದರು.