ಕುಶಾಲನಗರ, ಮಾ. 29: ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾಗಿ ಎಂ.ಕೆ. ದಿನೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎನ್. ಚಂದ್ರಮೋಹನ್ ಆಯ್ಕೆಯಾಗಿದ್ದಾರೆ. ಕುಶಾಲನಗರದ ಕನ್ನಿಕಾ ಇಂಟರ್‍ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ನಡೆದ ಸ್ಥಳೀಯ ದೇವಾಲಯಗಳ ಆಡಳಿತ ಮಂಡಳಿಗಳ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕೆ. ಆರ್. ಶಿವಾನಂದನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಾಲಯಗಳ ಒಕ್ಕೂಟದ ಬೈಲಾ ರಚನೆ ಸಲುವಾಗಿ ಸಮಿತಿ ರಚಿಸಲು ನಿರ್ಧರಿಸಲಾಯಿತು. ಕಾರ್ಯಾಧ್ಯಕ್ಷರಾಗಿ ಕೆ.ಆರ್. ಶಿವಾನಂದನ್, ಉಪಾಧ್ಯಕ್ಷರುಗಳಾಗಿ ಎಂ.ಎಸ್. ಶಿವಾನಂದ್, ಬಿ.ಎಲ್. ಸತ್ಯನಾರಾಯಣ, ಕೆ. ರಾಮ್‍ದಾಸ್, ಕಾರ್ಯದರ್ಶಿಯಾಗಿ ಡಿ.ವಿ. ರಾಜೇಶ್, ಸಂಘಟನಾ ಕಾರ್ಯದರ್ಶಿಯಾಗಿ ಡಿ.ಆರ್. ಸೋಮಶೇಖರ್, ಖಜಾಂಚಿಯಾಗಿ ಎಸ್.ಕೆ. ಶ್ರೀನಿವಾಸ ರಾವ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವಿ.ಎನ್. ವಸಂತಕುಮಾರ್, ಕೆ.ಕೆ. ದಿನೇಶ್, ಡಿ.ಆರ್. ಚಿಕ್ಕೇಗೌಡ, ವಿ.ಡಿ. ಪುಂಡರೀಕಾಕ್ಷ ಅವರುಗಳನ್ನು ನೇಮಿಸಲಾಯಿತು.
ಅರ್ಚಕರ ಸಂಘದ ಅಧ್ಯಕ್ಷರನ್ನು ಖಾಯಂ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ. ಕುಶಾಲನಗರ, ಬೈಚನಹಳ್ಳಿ, ಮುಳ್ಳುಸೋಗೆ ವ್ಯಾಪ್ತಿಯ 20 ದೇವಾಲಯಗಳ ಆಡಳಿತ ಮಂಡಳಿಯ ಪ್ರಮುಖರು ಹಾಗೂ ಪ್ರತಿನಿಧಿಗಳು, ಅರ್ಚಕರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.