ಮಡಿಕೇರಿ, ಮಾ. 29: ಮಡಿಕೇರಿಯ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್, ಮ್ಯಾನ್ಸ್ ಹಾಕಿ ಅಕಾಡೆಮಿ ಇವರ ಜಂಟಿ ಆಶ್ರಯದಲ್ಲಿ 24ನೇ ವರ್ಷದ ಬೇಸಿಗೆ ಹಾಕಿ ತರಬೇತಿ ಶಿಬಿರ ತಾ. 31 ರಿಂದ (ನಾಳೆಯಿಂದ) ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶಿಬಿರ ಸುಮಾರು ಒಂದು ತಿಂಗಳ ಕಾಲ ನಡೆಯುವದು. ಶಿಬಿರದಲ್ಲಿ ಹಾಕಿ, ಯೋಗ, ಅಥ್ಲೆಟಿಕ್ಸ್ ಕ್ರೀಡೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವದು. ಶಿಬಿರದ ನಡುವೆ ಚಾರಣವನ್ನು ಏರ್ಪಡಿಸಲಾಗುವದು.

ಕ್ರೀಡಾಸಕ್ತರು ಆಯೋಜಕರನ್ನು ದೂರವಾಣಿ ಮೂಲಕ ಅಥವಾ ನೇರವಾಗಿ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಅಥವಾ ಶಿಬಿರದ ದಿನ ನೇರವಾಗಿ ಬಂದು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಶಿಬಿರವು ಪ್ರತಿ ದಿನ ಬೆಳಿಗ್ಗೆ 6.30 ರಿಂದ 8.30ರ ವರೆಗೆ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕ್ರೀಡಾಪರಿಕರಗಳನ್ನು ತಾವೇ ತರಬೇಕಿದೆ. 5-16ರ ವಯೋಮಿತಿಯೊಳಗಿನ ಕ್ರೀಡಾಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಯೋಗ ಶಿಬಿರದಲ್ಲಿ ಭಾಗವಹಿಸುವವರಿಗೆ ಯಾವದೇ ವಯೋಮಿತಿ ಇರುವದಿಲ್ಲ.

ಹೆಚ್ಚಿನ ಮಾಹಿತಿಗೆ ಬಾಬು ಸೋಮಯ್ಯ- 9448895950, ಕಿಶನ್ ಪೂವಯ್ಯ - 9448899554, ಚುಮ್ಮಿ ದೇವಯ್ಯ - 9448899567, ಕೋಟೇರ ನಾಣಯ್ಯ - 9448874289 ಇವರನ್ನು ಸಂಪರ್ಕಿಸಬಹುದು.