ಮಡಿಕೇರಿ, ಮಾ. 29: ಮಡಿಕೇರಿ ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಧಾನಪರಿಷತ್‍ನಲ್ಲಿ ಬೇಡಿಕೆ ಮುಂದಿರಿಸಿದÀರು. ನಿನ್ನೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಮಡಿಕೇರಿ ನಗರ ಪ್ರಸ್ತುತ ಬೆಳೆಯುತ್ತಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಪ್ರವಾಸಿತಾಣ ರಾಜಾಸೀಟ್‍ಗೆ ಸ್ಥಳೀಯರು ತೆರಳಲು ಸಾಧ್ಯವಾಗದ ರೀತಿಯಲ್ಲಿ ಪ್ರವಾಸಿಗರು ಹೆಚ್ಚಾಗುತ್ತಿದ್ದಾರೆ. ಅಧಿಕ ಸಂಖ್ಯೆಯ ರೆಸಾರ್ಟ್‍ಗಳು ಇರುವದರಿಂದ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನ ಹಾಗೂ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ. ವಾಹನ ನಿಲುಗಡೆ ತೀರಾ ದುಸ್ತರವಾಗಿದ್ದು, ಪ್ರವಾಸಿಗರ ವಾಹನ ನಿಲುಗಡೆಗೆ ಎರಡು ಪ್ರತ್ಯೇಕ ಸ್ಥಳ ಗುರುತಿಸಿ ವ್ಯವಸ್ಥೆ ಮಾಡಬೇಕಿದೆ. ಇಂತಹ ಹಲವಾರು ಅಗತ್ಯತೆಗಳಿರುವದರಿಂದ ಮಡಿಕೇರಿ ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿದರು.
ವೀಣಾ ಬೇಡಿಕೆಗೆ ಉತ್ತರಿಸಿದ ಪೌರಾಡಳಿತ ಸಚಿವ ಈಶ್ವರ್ ಬಿ. ಖಂಡ್ರೆ ಅವರು ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರೋಥ್ಥಾನ ಯೋಜನೆಯಂತೆ ಅನುದಾನ ನೀಡಲಾಗಿದ್ದು, ಮಡಿಕೇರಿ ನಗರಸಭೆಯೂ ರೂ. 35 ಕೋಟಿ ಹಂಚಿಕೆ ಮಾಡಲಾಗಿದೆ. ವಿಶೇಷ ಪ್ಯಾಕೇಜ್‍ನ ಪ್ರಸ್ತಾವನೆ ಸರಕಾರದ ಮುಂದಿಲ್ಲ. ಇದೀಗ ಪರಿಷತ್ ಸದಸ್ಯರು ಬೇಡಿಕೆ ಮುಂದಿಟ್ಟಿದ್ದು, ಮುಖ್ಯಮಂತ್ರಿಗಳ ವಿವೇಚನೆಯಂತೆ
(ಮೊದಲ ಪುಟದಿಂದ) ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಿದಲ್ಲಿ ಪರಿಶೀಲಿಸುವದಾಗಿ ತಿಳಿಸಿದರು.
ಮಡಿಕೇರಿಯಲ್ಲಿ ಮೆಡಿಕಲ್ ಕಾಲೇಜು, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಜಿ.ಪಂ., ಕೋರ್ಟ್ ಕಟ್ಟಡ, ಮಾರುಕಟ್ಟೆ, ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದ್ದು, ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಮೆಡಿಕಲ್ ಕಾಲೇಜಿಗೆ ನಗರಸಭೆಯಿಂದ ನೀರು ಒದಗಿಸಲು ಸಾಧ್ಯವಿಲ್ಲ ಎಂದು ನಗರಸಭೆ ಹೇಳಿದೆ. ಈ ಎಲ್ಲಾ ಕಾರಣಗಳಿಂದ ವಿಶೇಷ ಪ್ಯಾಕೇಜ್‍ನ ಅಗತ್ಯ ಇರುವದಾಗಿ ವೀಣಾ ಅಚ್ಚಯ್ಯ ಗಮನ ಸೆಳೆದರು.