ಮಡಿಕೇರಿ, ಮಾ 29:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ. 30 ರಿಂದ (ಇಂದಿನಿಂದ) ರಾಷ್ಟ್ರಾದ್ಯಂತ ಹಮ್ಮಿಕೊಂಡಿರುವ ಲಾರಿ ಮುಷ್ಕರಕ್ಕೆ ಜಿಲ್ಲೆಯಲ್ಲಿಯೂ ಬೆಂಬಲ ವ್ಯಕ್ತಗೊಂಡಿದೆ.ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸುವದರೊಂದಿಗೆ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಶಿವು, ಕೊಡಗು ಜಿಲ್ಲಾ ಪ್ರವಾಸಿಗರ ಚಾಲಕ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಕುಳಿಯಕಂಡ ಸಂಪತ್, ಕೊಡಗು ಜಿಲ್ಲಾ ಆಟೋ ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಮೇದಪ್ಪ, ಗೂಡ್ಸ್ ಆಟೋ ಮಾಲೀಕರ ಸಂಘದ ಅಧ್ಯಕ್ಷ ಹರೀಶ್ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲಾರಿ ಮುಷ್ಕರಕ್ಕೆ ಬೆಂಬಲ ಕುಶಾಲನಗರ: ಹಲವು ಬೇಡಿಕೆಗಳನ್ನು ಮುಂದಿಟ್ಟು ತಾ. 30 ರಿಂದ (ಇಂದಿನಿಂದ) ರಾಷ್ಟ್ರದಾದÀ್ಯಂತ ನಡೆಯಲಿರುವ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ಕರೆ ಹಿನ್ನೆಲೆಯಲ್ಲಿ ಕುಶಾಲನಗರ ಕಾವೇರಿ ಲಾರಿ ಮಾಲೀಕರ ಸಂಘ ಲಾರಿ ಸಂಚಾರ ಸ್ಥಗಿತಗೊಳಿಸಲಿದೆ ಎಂದು ಸಂಘದ ಅಧ್ಯಕ್ಷ ಜಿ.ಸಿ.ನಾಗರಾಜ್ ತಿಳಿಸಿದ್ದಾರೆ. ಇನ್ಶೂರೆನ್ಸ್ ಪ್ರೀಮಿಯಂ ಏರಿಕೆ, ಆರ್ಟಿಒ ಶುಲ್ಕ ಹೆಚ್ಚಳ, ಹಳೆಯ ವಾಹನಗಳ ರದ್ಧತಿ, ಟೋಲ್ ಸಮಸ್ಯೆ ಹಾಗೂ ಮರಳು ಪರ್ಮಿಟ್ ನಿಯಮ ಮುಂತಾದ ಬೇಡಿಕೆ ಮುಂದಿಟ್ಟು ಲಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.