ಗೋಣಿಕೊಪ್ಪಲು: ನೆಮ್ಮಾಲೆ ಕಿತ್ತ್ ಶ್ರೀ ಅಯ್ಯಪ್ಪ ದೇವರ ವಾರ್ಷಿಕೋತ್ಸವ ದೇವರ ದರ್ಶನದ ಮೂಲಕ ತೆರೆ ಕಾಣಲಿದೆ.
ತಾ. 24 ರಿಂದ ಆರಂಭಗೊಂಡ ಹಬ್ಬದಲ್ಲಿ ಬೆ. 6.30ಕ್ಕೆ ಉತ್ಸವಮೂರ್ತಿ ಪ್ರದರ್ಶನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ ತೂಚಂಬಲಿ, 8ಕ್ಕೆ ಪೂಜೆ ಅನ್ನದಾನ ನಡೆದಿದೆ. ಇದರಂತೆ ಕೊನೆಯ ದಿನ ಮಧ್ಯಾಹ್ನ 2ಕ್ಕೆ ತೆಂಗಿನಕಾಯಿಗೆ ಗುಂಡು ಹಾಕುವದು, 4 ಗಂಟೆಗೆ ಉತ್ಸವಮೂರ್ತಿ ದರ್ಶನ ಹಾಗೂ ಅವಭೃತ ಸ್ನಾನ, ರಾತ್ರಿ 8ಕ್ಕೆ ದೇವಾಲಯದಲ್ಲಿ ಉತ್ಸವಮೂರ್ತಿ ದರ್ಶನ, ಮಹಾಪೂಜೆ ಹಾಗೂ ಅನ್ನದಾನ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಚೆಟ್ಟಂಗಡ ಪಿ. ಡಾಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.