ಪೊನ್ನಂಪೇಟೆ, ಮಾ. 30: ಬಿಸಿಲ ತಾಪ ಏರುತ್ತಿದ್ದಂತೆ ಅರಣ್ಯವೆಲ್ಲ ಬರಡಾಗಿರುವ ಹಿನ್ನಲೆಯಲ್ಲಿ ನೀರನ್ನು ಹುಡುಕುತ್ತಾ ನಾಡಿಗೆ ಬಂದ ಕಾಡೆಮ್ಮೆಯೊಂದು ರಾತ್ರಿ ವೇಳೆ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ದ.ಕೊಡಗಿನ ಬಾಳೆಲೆ ಸಮೀಪದ ಕುಂಬಾರಕಟ್ಟೆ ಗಿರಿಜನ ಕಾಲೋನಿಯಲ್ಲಿ ಸಂಭವಿಸಿದೆ. ಯಾರಿಗೂ ತಿಳಿಯದ ಕಾರಣ ಗುಂಡಿಯಲ್ಲೇ ಕಾಡೆಮ್ಮೆ ಹೋರಾಡಿ ಕೊನೆಗೂ ಸಾವಿಗೆ ಶರಣಾಗಿದೆ. ಮಲ್ಲೂರು ಅರಣ್ಯದಿಂದ ಬಂದಿರಬಹುದೆಂದು ಶಂಕಿಸಲಾಗಿರುವ ಈ ಕಾಡೆಮ್ಮೆ ಕುಂಬಾರಕಟ್ಟೆ ಗಿರಿಜನ ಕಾಲೋನಿ ವಾಸಿಗಳು ಕುಡಿಯುವ ನೀರು ಗುಂಡಿಗೆ ರಾತ್ರಿ ವೇಳೆ ಬಿದ್ದಿದೆ ಎನ್ನಲಾಗಿದೆ. ನೀರು ಗುಂಡಿ ಆಳವಾಗಿದ್ದು, ಕಿರಿದಾದ ಕಾರಣ ಕಾಡೆಮ್ಮೆಗೆ ಮೇಲೆ ಬರಲು ಸಾಧ್ಯವಾಗಿಲ್ಲ. ನೀರು ಗುಂಡಿಗೆ ಕಾಡೆಮ್ಮೆ ಬಿದ್ದು ಸಾವನಪ್ಪಿದ ವಿಷಯ ಮರುದಿನ ಕಾಲೋನಿ ವಾಸಿಗಳಿಂದ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಆಗಮಿಸಿ ಮಹಜರು ನಡೆಸಿ ಅಂತ್ಯಕ್ರಿಯೆ ನಡೆಸಿaದ್ದಾರೆ.