ಮಡಿಕೇರಿ, ಮಾ. 30: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಜನಪದ ನೃತ್ಯ ಹಾಗೂ ಗುಂಪು ಹಾಡಿನ ಸ್ಪರ್ಧೆಯನ್ನು ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಎ.ಎಸ್. ಈರಪ್ಪ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಹಿಸಿದ್ದರು. ವಿವಿಧ ಸ್ಪರ್ಧೆಯಲ್ಲಿ ಹತ್ತು ತಂಡಗಳು ಭಾಗವಹಿಸಿದ್ದರು.
ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪ್ರಥಮ ದರ್ಜೆ ಕಾಲೇಜು ಮಡಿಕೇರಿ ಪಡೆದು ಕೊಂಡರೆ, ಜನಪದ ನೃತ್ಯದಲ್ಲಿ ಸರ್ವೋದಯ ಕಾಲೇಜು ವೀರಾಜಪೇಟೆ ಪ್ರಥಮ ಸ್ಥಾನಗಳಿಸಿತು. ತೀರ್ಪುಗಾರರಾಗಿ ಎನ್.ಸಿ. ನೀಲಮ್ಮ, ನಿವೃತ್ತ ಉಪನ್ಯಾಸಕರು ಕಾವೇರಿ ಕಾಲೇಜು ವೀರಾಜಪೇಟೆ ಮತ್ತು ಉಷಾಲತ ವಾಣಿಜ್ಯ ವಿಭಾಗದ ಮುಖ್ಯಸ್ಥರು ಕಾವೇರಿ ಕಾಲೇಜು ವೀರಾಜಪೇಟೆ ಇವರು ಭಾಗವಹಿಸಿದ್ದರು.