ಮಡಿಕೇರಿ, ಮಾ. 30: ಗ್ಯಾಸ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡು ತಕ್ಷಣ ನಂದಿಸಿದ ಪರಿಣಾಮ ಭಾರೀ ಅನಾಹುತ ತಪ್ಪಿದ್ದು, ಅಂಗಡಿಗೆ ಸಣ್ಣ ಪುಟ್ಟ ಹಾನಿಯಾಗಿದೆ.

ನಗರದ ರೇಸ್‍ಕೋರ್ಸ್ ರಸ್ತೆಯ ಮಹಮದ್ ಎಂಬವರ ಮಾಲೀಕತ್ವದ ಮೈಟೈಸನ್ ಕೋಳಿ ಅಂಗಡಿಯಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಗ್ಯಾಸ್ ಸೋರಿಕೆಯಿಂದಾಗಿ ಅಂಗಡಿಯಲ್ಲಿ ಅಳವಡಿಸಿದ್ದ ಗ್ಲಾಸ್ ಪುಡಿಯಾಗಿದ್ದು, ಟೈಲ್ಸ್ ಹಾಗೂ ಇತರ ವಸ್ತುಗಳಿಗೆ ಹಾನಿಯಾಗಿದೆ. ಈ ಸಂದರ್ಭ ಉಂಟಾದ ಶಬ್ದಕ್ಕೆ ಅಕ್ಕಪಕ್ಕದ ಅಂಗಡಿಯವರು ಭಯಭೀತರಾಗಿದ್ದು, ಕೂಡಲೇ ಕೆಲವರು ಬಂದು ಬೆಂಕಿ ನಂದಿಸಿ ಮುಂದಾಗುತ್ತಿದ್ದ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ.