ಶನಿವಾರಸಂತೆ, ಮಾ. 30: ಸ್ಥಳೀಯ ಗ್ರಾ.ಪಂ. ನಿಂದ ಸಾರ್ವಜನಿಕರ ವಿರೋಧದ ನಡುವೆಯೂ ತಡರಾತ್ರಿ ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಂತೆ ಕಸವಿಲೇವಾರಿ ಮಾಡುತ್ತಿರುವ ಸಂಗತಿ ಬಯಲಾಗಿದೆ. ಹಗಲು ವೇಳೆ ಪಟ್ಟಣದ ಕಸ ಸಂಗ್ರಹಿಸಿ, ಪಂಚಾಯಿತಿ ಬಳಿ ಟ್ರ್ಯಾಕ್ಟರ್ ನಿಲುಗಡೆಗೊಳ್ಳುತ್ತಿದೆ. ಮಧ್ಯರಾತ್ರಿ ಜನಸಂಚಾರ ಸ್ತಬ್ಧಗೊಂಡ ಸಂದರ್ಭ ಜನಾಕ್ರೋಶ ವ್ಯಕ್ತಗೊಂಡು ಪ್ರತಿರೋಧವಿರುವ ಜಾಗದಲ್ಲೇ ಸುರಿಯಲಾಗುತ್ತಿದೆ ಎಂದು ಗೊತ್ತಾಗಿದೆ.