ಗೋಣಿಕೊಪ್ಪಲು, ಮಾ. 30: ರೋಟ್ರ್ಯಾಕ್ಟ್ ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಪೊನ್ನಂಪೇಟೆ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ರೋಟ್ರ್ಯಾಕ್ಟ್ ಕ್ಲಬ್ ಹಲವು ಪ್ರಶಸ್ತಿ ಪಡೆದುಕೊಂಡಿದೆ.
ಅಲ್ಲಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಾಜೆಕ್ಟ್ ಹಾಗೂ ಕ್ರೀಡಾ ಚಟುವಟಿಕೆ ಹೆಚ್ಚು ನಡೆಸಿದ್ದರಿಂದ ಉತ್ತಮ ಕ್ಲಬ್ ಪ್ರಶಸ್ತಿ ದೊರಕಿದೆ. ಸಮ್ಮೇಳನದಲ್ಲಿ ಶಿಸ್ತು ಬದ್ದ ತಂಡವಾಗಿ ಅರ್ಲಿ ಬರ್ಡ್ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ, ಗುಂಪು ನೃತ್ಯ ಹಾಗೂ ಹಾಡುಗಾರಿಕೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯಿಂದ 25 ಸದಸ್ಯರು ಸ್ಪರ್ಧಿಸಿದ್ದರು. ಮೈಸೂರು, ಚಾಮರಾಜನಗರ, ಮಂಗಳೂರು ತಂಡಗಳು ಪಾಲ್ಗೊಂಡಿದ್ದವು.