ಗೋಣಿಕೊಪ್ಪಲು, ಮಾ. 30: ದೇವರಪುರ ಸಮೀಪದ ತಾರಿಕಟ್ಟೆಯಲ್ಲಿ ಕಾಡಾನೆ ಧಾಳಿಗೆ ಬಲಿಯಾದ ಸಫಾನಳ ಮನೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಮುಖರು ಭೇಟಿ ನೀಡಿ ಸಾಂತ್ವನ ಹೇಳಿದರು.
ಸರ್ಕಾರದಿಂದ ದೊರೆಯ ಬೇಕಾದ ಸೌಲಭ್ಯವನ್ನು ಶೀಘ್ರದಲ್ಲಿ ನೀಡಲಾಗುವದು ಹಾಗೂ ಆಕೆಯ ಸಹೋದರ ಶಾಕೀರ್ಗೆ ಸರ್ಕಾರಿ ಉದ್ಯೋಗ ನೀಡುವ ಮೂಲಕ ಕುಟುಂಬಕ್ಕೆ ನೆರವು ನೀಡಲು ಪ್ರಯತ್ನಿಸುತ್ತೇವೆ. ಈ ಬಗ್ಗೆ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ಮಾಡಿ ಕುಟುಂಬಕ್ಕೆ ರೂ. 20 ಲಕ್ಷದ ಪರಿಹಾರ ನೀಡುವಂತೆ ಕೋರಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಕೆ.ಎಂ. ಯಾಕೂಬ್ ಹೇಳಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಅಬ್ದುಲ್ ಸಮ್ಮದ್, ಗೋಣಿಕೊಪ್ಪ ಘಟಕದ ಅಧ್ಯಕ್ಷ ಎ.ಎಸ್. ಕಲೀಮುಲ್ಲಾ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಪೋಕುಟ್ಟಿ, ಸದಸ್ಯ ಶಮೀರ್, ಮುಸ್ಲಿಂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹನೀಫಾ ಇದ್ದರು.