ಗೋಣಿಕೊಪ್ಪಲು, ಮಾ. 30: ಇಲ್ಲಿನ ಕಾವೇರಿ ಪದವಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ವೀರಾಜಪೇಟೆಯ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ “ಪದವಿ ನಂತರ ಮುಂದೇನು?” ಅನ್ನುವ ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದ ಉಪನ್ಯಾಸಕ ಅಕ್ರಂ, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವದು ಅವಶ್ಯಕವಾಗಿದೆ. ತರಬೇತಿ ಕೇಂದ್ರಗಳು ಕೇವಲ ಮಾರ್ಗದರ್ಶನ ನೀಡುತ್ತವೆ. ವ್ಯವಸ್ಥಿತವಾಗಿ ಓದುವದು ನಮ್ಮ ಕರ್ತವ್ಯ ಎಂದರು.
ಕಾರ್ಯಾಗಾರದ ಸಂಚಾಲಕರಾದ ಉಪನ್ಯಾಸಕಿ ಪುಳ್ಳಂಗಡ ಸಿ. ಮೀನಾಕ್ಷಿ ಮಾತನಾಡಿ, ತಂತ್ರಜ್ಞಾನಮಯವಾಗಿರುವ ಈ ಪ್ರಪಂಚದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದಷ್ಟು ಸವಲತ್ತುಗಳು ಲಭಿಸುತ್ತಿವೆ. ಉದ್ಯೋಗವಕಾಶಗಳೊಂದಿಗೆ, ಉದ್ಯೋಗ ಆಕಾಂಕ್ಷಿಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಹಾಗಾಗಿ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು
ಕಾರ್ಯಾಗಾರದಲ್ಲಿ ಉಪನ್ಯಾಸಕಿ ಸೀಮಾ ಹಾಜರಿದ್ದರು. ವಿದ್ಯಾರ್ಥಿನಿ ಪ್ರಿಯ ಪೊನ್ನಮ್ಮ ಪ್ರಾರ್ಥಿಸಿ, ಶ್ರಿಧನ್ಯ ಸ್ವಾಗತಿಸಿ, ವಿದ್ಯಾರ್ಥಿ ದೀಪಕ್ ವಂದಿಸಿದರು.