ಬೆಂಗಳೂರು, ಮಾ. 30: ನಂದಿನಿ ಹಾಲು, ಮೊಸರಿನ ಬೆಲೆಯನ್ನು ಪ್ರತಿ ಲೀಟರ್‍ಗೆ ರೂ. 2 ಹೆಚ್ಚಳ ಮಾಡಲಾಗಿದ್ದು, ನೂತನ ದರ ಏ. 1 ರಿಂದ ಜಾರಿಗೆ ಬರಲಿದೆ. ಹಾಲು ಮತ್ತು ಮೊಸರಿನ ದರ ಹೆಚ್ಚಳದ ಕುರಿತು ಇಂದು ಕೆಎಂಎಫ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಇನ್ನು ವಿವಿಧ ದರ್ಜೆಯ ನಂದಿನಿ ಹಾಲು ಮತ್ತು ಮೊಸರಿನ ದರದಲ್ಲಿ ಪ್ರತಿ ಲೀಟರ್‍ಗೆ ಎರಡು ರೂಪಾಯಿಯಷ್ಟು ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಹಾಲಿನ ದರ ರೂ. 33 ಇದೆ. ಇನ್ನು ಉತ್ತರ ಕರ್ನಾಟಕದಲ್ಲಿ ಹಾಲಿನ ದರ ರೂ. 34 ಇದ್ದು ಇದರಲ್ಲಿ ರೂ. 2 ಹೆಚ್ಚಳ ಮಾಡಲಾಗಿದೆ. 2016ರ ಜನವರಿಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು

ರೂ. 4 ಮತ್ತು ಮೊಸರಿನ ದರವನ್ನು ರೂ. 2 ಹೆಚ್ಚಳ ಮಾಡಲಾಗಿತ್ತು.