ಮಡಿಕೇರಿ, ಮಾ.30 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಸಹಕಾರದೊಂದಿಗೆ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಅವರ ಸಂಪಾದಕೀಯದಲ್ಲಿ ಹೊರ ಬಂದಿರುವ ‘ತಿಂಗೊಲ್ದ ಬೊಲ್ಪು’ ತುಳು ಮಾಸ ಪತ್ರಿಕೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗಡೆ ಅವರು ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇತ್ತೀಚಿನ ದಿನಗಳಲ್ಲಿ ತುಳು ಭಾಷೆಯ ಪತ್ರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಗೊಳ್ಳುತ್ತಿದ್ದು, ಇವುಗಳು ತುಳು ಭಾಷೆ, ಸಂಸ್ಕøತಿ ಹಾಗೂ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
“ತಿಂಗೊಲ್ದ ಬೊಲ್ಪು” ಪತ್ರಿಕೆ ಕೂಡ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಸಮಾಜದ ಗಮನ ಸೆಳೆಯಬೇಕೆಂದು ಕರೆ ನೀಡಿದರು.
ಇದೇ ಸಂದರ್ಭ ಡಾ| ವೀರೇಂದ್ರ ಹೆಗಡೆ ಅವರನ್ನು ತುಳುವೆರ ಜನಪದ ಕೂಟದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ “ತಿಂಗೊಲ್ದ ಬೊಲ್ಪು” ಪತ್ರಿಕೆಯ ಸಂಪಾದಕ ಪಿ.ಎಂ.ರವಿ, ಅಧ್ಯಕ್ಷ ಶೇಖರ್ ಭಂಡಾರಿ, ಬಿಲ್ಲವ ಸಮಾಜದ ಅಧ್ಯಕ್ಷ ಹಾಗೂ ಕೂಟದ ಉಪಾಧ್ಯಕ್ಷ ಆನಂದ ರಘು, ಗೌರವ ಸಲಹೆಗಾರ ಬಾಲಕೃಷ್ಣ ರೈ, ಕೂಟದ ಮಡಿಕೇರಿ ತಾಲೂಕು ನಿರ್ದೇಶಕ ಬಿ.ಎಸ್.ಆನಂದ , ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಆಳ್ವ, ವಕ್ತಾರ ಡಿ.ರವಿ ಉಪಸ್ಥಿತರಿದ್ದರು.