ಮಡಿಕೇರಿ, ಮಾ. 30: ಸರಕಾರಿ ಹಾಗೂ ಜನಪ್ರತಿನಿಧಿಗಳ ಕಚೇರಿಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇರಬೇಕೆನ್ನುವ ಉದ್ದೇಶದಿಂದ ಪ್ರತಿಯೊಂದು ಕಚೇರಿಗೆ ಭಾವಚಿತ್ರವನ್ನು ವಿತರಿಸುವ ಅಭಿಯಾನಕ್ಕೆ ದಲಿತ ಸಂಘರ್ಷ ಸಮಿತಿ ಚಾಲನೆ ನೀಡಿರುವದಾಗಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ. ಜಿ.ಪಂ. ಕಚೇರಿಯಲ್ಲಿ ಅಧ್ಯಕ್ಷ ಬಿ.ಎ. ಹರೀಶ್ ಅವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಪುಸ್ತಕ ಮತ್ತು ಭಾವಚಿತ್ರವನ್ನು ವಿತರಿಸಿ ಮಾತನಾಡಿದರು. ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎ. ರವಿ, ತಾಲೂಕು ಸಂಚಾಲಕ ಹೆಚ್.ಎಲ್. ಕುಮಾರ್, ಸಂಘಟನಾ ಸಂಚಾಲಕ ಹೆಚ್.ಪಿ. ದೀಪಕ್, ಸಂಚಾಲಕ ಹೆಚ್.ಎನ್. ಸಂತೋಷ್ ಉಪಸ್ಥಿತರಿದ್ದರು.