ಜನರಲ್ ತಿಮ್ಮಯ್ಯ : ಈ ಹೆಸರು ಕೇಳುವಾಗಲೇ ಮೈ ನವಿರೇಳುತ್ತದೆ. ವೀರ, ಶೂರ, ಧೀರ ಎಂಬ ಪದವೇ ಜನರಲ್ ಕೊಡಂದೇರ ಟಿಮ್ಮಿ ತಿಮ್ಮಯ್ಯ, ತಿಮ್ಮಯ್ಯ ಜನರಲ್‍ಗಳ ಜನರಲ್, ಸೈನಿಕರ ಸೈನಿಕರಾಗಿ ಕೀರ್ತಿಯ ಶಿಖರವೇರಿದ ಮಹಾಪುರುಷ. ಪುಟ್ಟ ಕೊಡಗಿನ ಕೀರ್ತಿ ಪತಾಕೆಯನ್ನು ಪ್ರಪಂಚದ ನಾಲ್ಕು ದಿಕ್ಕುಗಳಿಗೆ ಹಬ್ಬಿಸಿದ ತಿಮ್ಮಯ್ಯ ಸಾಧಾರಣ ವ್ಯಕ್ತಿಯಲ್ಲ. ವೀರ-ಶೂರತನಕ್ಕೆ ತಕ್ಕಂತೆ ಬುದ್ಧಿ, ಜ್ಞಾನಶಕ್ತಿ, ಸಾಮಥ್ರ್ಯದಲ್ಲಿ ಹೆಸರುವಾಸಿಯಾಗಿದ್ದರು. ಜನರಲ್ ತಿಮ್ಮಯ್ಯ ಪ್ರಪಂಚದ ಮಿಲಿಟರಿ ಚರಿತ್ರೆಯಲ್ಲಿ ಒಬ್ಬ ವಿಶೇಷ ಸಾಧಕ.
217 ವರ್ಷಗಳ ಹಿಂದೆ 1800ನೇ ಶತಕದಲ್ಲಿ ರಾವ್ ಬಹದ್ದೂರ್ ಚೆಪ್ಪುಡಿರ ಸುಬ್ಬಯ್ಯ ಹೆಸರು ಮಾಡಿದ ವ್ಯಕ್ತಿ. ಇವರ ಮಗ ಸೋಮಯ್ಯ ವಿದ್ಯಾವಂತ, ಸಮಾಜ ಸೇವಕ, ದಾನದಲ್ಲಿ ಎತ್ತಿದ ಕೈ. ಮಡಿಕೇರಿ ಪೇಟೆಯ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ 1895ರಲ್ಲಿ ‘ಪಂಪ್ ಕೆರೆ’ ನಿರ್ಮಾಣಕ್ಕಾಗಿ 15000 ರೂಪಾಯಿ ಅಂದಿನ ಕಾಲದಲ್ಲಿ ದಾನ ಮಾಡಿದವರು. ಇವರ ಸಮಾಜ ಸೇವೆಗಾಗಿ ಬ್ರಿಟಿಷ್ ಸರಕಾರ ಇವರಿಗೆ 1902ರಲ್ಲಿ ರಾವ್ ಬಹದ್ದೂರ್ ಬಿರುದು ಕೊಟ್ಟು ಗೌರವಿಸಿತು. ಮಡಿಕೇರಿಯ ಸನ್ನಿಸೈಡ್ ಮನೆಯನ್ನು ಇವರೇ ನಿರ್ಮಿಸಿದರು. ಸೋಮಯ್ಯ ಅವರ ಒಬ್ಬಳೇ ಮಗಳು ‘‘ಚೆಪ್ಪುಡಿರ ಚೀತವ್ವ’’ ಇವರನ್ನು ವಿವಾಹವಾದರು. ಕೊಡಂದೇರ ತಿಮ್ಮಯ್ಯ. ಚೀತವ್ವ ಅವರು ಸಮಾಜ ಸೇವಕಿ ಹಾಗೂ ದೊಡ್ಡ ದಾನಿಗಳಾಗಿದ್ದರು. ಹಾಗಾಗಿ ಇವರಿಗೆ ಬ್ರಿಟಿಷ್ ಸರಕಾರ 1930ರಲ್ಲಿ ‘‘ಕೈಸರ್-ಇ-ಹಿಂದ್’ ಪ್ರಶಸ್ತಿ ಕೊಟ್ಟು ಗೌರವಿಸಿತು. 1944ರಲ್ಲಿ ಚೀತವ್ವ ನಿಧನರಾದ ಸಂದರ್ಭದಲ್ಲಿ ಆಗ ಕೊಡಗಿನ ಚೀಫ್ ಕಮೀಷನರ್ ಪೊಲೀಸರಿಂದ ‘‘ಗಾರ್ಡ್ ಆಫ್ ಆನರ್’’ ಗೌರವ ಕೊಡಿಸಿದರು. ಇವರ ಸುಪುತ್ರನೇ ಜನರಲ್ ತಿಮ್ಮಯ್ಯ.
ತಿಮ್ಮಯ್ಯ ಕುಟುಂಬ : ಕೊಡಂದೇರ ತಿಮ್ಮಯ್ಯ-ಚೀತವ್ವ ದಂಪತಿಗಳಿಗೆ ಒಟ್ಟು 6 ಮಕ್ಕಳು. ಅವರಲ್ಲಿ 3 ಗಂಡು, ಮತ್ತು 3 ಹೆಣ್ಣು ಮಕ್ಕಳು. ಪೊನ್ನಪ್ಪ, ತಿಮ್ಮಯ್ಯ, ಸೋಮಯ್ಯ ಈ ಮೂವರು ಗಂಡು ಮಕ್ಕಳಲ್ಲಿ ಪೊನ್ನಪ್ಪ ಐ.ಎನ್.ಎ. (ಇಂಡಿಯನ್ ನ್ಯಾಷನಲ್ ಆರ್ಮಿ)ಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದರು. 1954 ರಲ್ಲಿ ಇವರು ಮಡಿಕೇರಿಯಲ್ಲಿ ನಡೆದ ಒಂದು ವಾಹನ ಅಪಘಾತದಲ್ಲಿ ವಿಧಿವಶರಾದರು. ತಿಮ್ಮಯ್ಯನವರು 31.03.1906 ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಇವರಿಗೆ ಮುತ್ತಜ್ಜ (ತಾತಿ, ಚೀತವ್ವನವರ ಅಜ್ಜ) ಸುಬ್ಬಯ್ಯನವರ ಹೆಸರನ್ನಿಟ್ಟರು. ಇವರನ್ನು ಮನೆಯಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ‘ಡುಬ್ಬು’ ಇವರನ್ನು ವಿದ್ಯಾಭ್ಯಾಸಕ್ಕಾಗಿ ನೀಲಗಿರಿ ಕೂನೂರು ಸೈಂಟ್ ಜೋಸೆಫ್ ಸ್ಕೂಲಿಗೆ ಸೇರಿಸುವಾಗ ‘ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ’ ಎಂದು ಹೆÀಸರನ್ನು ನೋಂದಾಯಿಸಲಾಯಿತು. ಇಂಗ್ಲೀಷ್ ಆಡಳಿತದ ಶಾಲೆಯವರು ಈ ಹೆಸರನ್ನು ಕೆ. ಎಸ್. ತಿಮ್ಮಯ್ಯ ಎಂದು ಬದಲಿಸಿ ದಾಖಲಿಸಿದರು. ಹಾಗಾಗಿ ತಂದೆಯ ತಿಮ್ಮಯ್ಯ ಹೆಸರೇ ಮಗನಿಗೂ ಬಂತು. ಜನರಲ್ ತಿಮ್ಮಯ್ಯನವರ ಮತ್ತೊಬ್ಬ ಸಹೋದರ ಸೋಮಯ್ಯ 1948ರ ಕಾಶ್ಮೀರ ಯುದ್ಧದಲ್ಲಿ ವೀರ ಮರಣವನ್ನಪ್ಪಿದರು.
ಸಂಸಾರ : ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರು ಕೋದಂಡ ಕಾರ್ಯಪ್ಪ ಅವರ ಮಗಳು ‘ನೀನಾ’ ಅವರನ್ನು ಮದುವೆಯಾದರು. ಇವರಿಗೆ ಒಬ್ಬಳೇ ಮಗಳು ‘ಮಿರಾಯಿ’ ಇವರನ್ನು ಮಿಲಿಟರಿ ಅಧಿಕಾರಿ ಕೊಂಗೇಟಿರ ಚಂಗಪ್ಪ ಅವರಿಗೆ ಮದುವೆ ಮಾಡಿ ಕೊಡಲಾಯಿತು. ಈಗ ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಓದು ಮತ್ತು ತರಬೇತಿ : ಕೂನೂರು ಸೈಂಟ್ ಜೋಸೆಫ್ ಸ್ಕೂಲ್ ಹಾಗೂ ಬೆಂಗಳೂರಿನ ಬಿಶಪ್ ಕಾಟನ್ ಸ್ಕೂಲಿನಲ್ಲಿ ಓದಿದ ತಿಮ್ಮಯ್ಯ 1922ರಲ್ಲಿ ತನ್ನ 16ನೇ ವಯಸ್ಸಿನಲ್ಲಿ ಡೆಹರಾಡೂನ್‍ನ ’’ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿಗೆ’’ ಸೇರಿದರು. ಆ ನಂತರ ಇಂಗ್ಲೆಂಡಿನ ಸ್ಟ್ಯಾಂಡಸ್ರ್ಟ್‍ಗೆ ಹೋದರು. ಹೀಗೆ ಓದು, ತರಬೇತಿ, ಪದವಿ ಎಲ್ಲವನ್ನೂ ಪಡೆದು 1926ರಲ್ಲಿ ತನ್ನ 20ನೇ ಎಳೆಯ ವಯಸ್ಸಿನಲ್ಲಿ ‘‘ರಾಯಲ್ ಇಂಡಿಯನ್ ಆರ್ಮಿ’’ಯ ಸೆಕೆಂಡ್ ಲೆಫ್ಟಿನೆಂಟ್ ಆದರು.
ಮಿಲಿಟರಿ ಕಡೆಗೆ : ಆರ್ಮಿಯಲ್ಲಿ ಸ್ಯಾಟಿಶ್ ಯೂನಿಟ್‍ನ ಥೈಲ್ಯಾಂಡ್ ಇನ್‍ಫ್ರೆಂಟ್ರಿ, ಅಲ್ಲಿಂದ ಹೈದರಾಬಾದ್ ರೆಜಿಮೆಂಟ್‍ನಲ್ಲಿ (ಈಗ ಕುಮೋನ್ ರೆಜಿಮೆಂಟ್) ಸೇವೆ ಮಾಡಿದರು. ಪ್ರಪಂಚ ಮಹಾಯುದ್ಧದಲ್ಲಿ ಭಾಗವಹಿಸಿ, ಸುಮಾರಿಗೆ ಎಲ್ಲಾ ದೇಶ-ವಿದೇಶಗಳಲ್ಲಿ ಸೇವೆ ಮಾಡಿದರು. ಇವರ ಧೈರ್ಯ ಸಾಹಸಗಳನ್ನು ಮೆಚ್ಚಿ ಅಂದಿನ ಗಣ್ಯರುಗಳಾದ ಲಾರ್ಡ್ ಮೌಂಟ್ ಬ್ಯಾಟನ್, ಜನರಲ್ ಸ್ಟಿಲ್‍ವೆಲ್, ಫೀಲ್ಡ್ ಮಾರ್ಷಲ್ ಸರ್. ವಿಲಿಯಂ ಸ್ಲಿಮ್ ನಂತವರು ಜನರಲ್ ತಿಮ್ಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ಪ್ರಥಮ ಇಂಡಿಯನ್ : 2ನೇ ಮಹಾಯುದ್ಧದಲ್ಲಿ ಇಡೀ ಒಂದು ಬ್ರಿಗೇಡನ್ನು ಕಮಾಂಡ್ ಮಾಡಿದ ಪ್ರಥಮ ಇಂಡಿಯನ್ ಆಫೀಸರ್ ಎಂಬ ಹೆಗ್ಗಳಿಕೆಗೆ ತಿಮ್ಮಯ್ಯ ಅವರು ಪಾತ್ರರಾದರು. ಆ ಸಂದರ್ಭದಲ್ಲಿ ಅವರಿಗೆ ಎಂಪರರ್ ಕಿಂಗ್ ಜಾರ್ಜ್ ಅವರಿಂದ ಡಿಸ್ಟಿಂಗ್ವಿಶ್ಡ್ ಸರ್ವಿಸ್ ಆರ್ಡರ್ ಬಿರುದು ಸಿಕ್ಕಿತು. ಸಿಂಗಾಪುರದ ಇಂಡಿಯನ್ ಆರ್ಮಿಯ ಪ್ರತಿನಿಧಿ ಆಗಿಯೂ, 1946ರಲ್ಲಿ ಜಪಾನಿನಲ್ಲಿ ಇಂಡಿಯನ್ ಇಸ್ಟೆಂಟ್ರಿ ಬ್ರೀಗೆಡ್‍ನ ಮುಖ್ಯಸ್ಥರಾಗಿಯೂ, ಪಿಲಿಪೈನ್ಸ್‍ನಲ್ಲಿ ಇಂಡಿಯನ್ ಆರ್ಮಿಯ ಪ್ರತಿನಿಧಿಯೂ ಆಗಿ ಸೇವೆ ಸಲ್ಲಿಸಿದ್ದರು. 1947ರಲ್ಲಿ 5ನೇ ಇಂಡಿಯನ್ ಬ್ರಿಗೇಡ್‍ನ ಮುಖ್ಯಸ್ಥರಾಗಿದ್ದರು. ಆರ್ಮಿ ಪುನರ್ ರಚನಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ದೇಶ ವಿಭಜನೆಯಾದಾಗ 1947ರಲ್ಲಿ ಇಂಡಿಯನ್ ಡಿವಿಶನ್‍ನ ಕಮಾಂಡ್ ವಹಿಸಿಕೊಂಡರು. 1945ರಲ್ಲಿ 1948ರಲ್ಲಿ 19ನೇ ಇಂಡಿಯನ್ ಡಿವಿಶನ್‍ನ ಮುಖ್ಯಸ್ಥರಾದರು.
ಸಾಹಸ : 1948ರ ಚಳಿಗಾಲದಲ್ಲಿ ಜಮ್ಮುಕಾಶ್ಮೀರದ ಜೋಜಿಲಾ ಪಾಸ್ ಎಂಬ ಸ್ಥಳಕ್ಕೆ 12 ಸಾವಿರ ಅಡಿ ಎತ್ತರದ ಮಂಜುಗೆಡ್ಡಯ ಬೆಟ್ಟದ ತುದಿಗೆ ‘‘ಸ್ಟುವರ್ಟ್’’ ಎಂಬ ದೊಡ್ಡ ಟ್ಯಾಂಕನ್ನು ವಿಮಾನದ ಮೂಲಕ ಸಾಗಿಸಿ, ಶತ್ರುಪಡೆಯನ್ನು ಧೂಳೀಪಟ ಮಾಡುವಲ್ಲಿ ತಿಮ್ಮಯ್ಯ ಅವರು ತೋರಿದ ಸಾಹಸ, ಶೌರ್ಯ ಇಡೀ ಪ್ರಪಂಚದ ಮಿಲಿಟರಿ ಚರಿತ್ರೆಯಲ್ಲೇ ಅಪರೂಪವಾದದ್ದು ಎಂಬ ಉಲ್ಲೇಖವಿದೆ. ಜನರಲ್ ತಿಮ್ಮಯ್ಯ ಅವರಿಗೆ ಅಂದು ಯಾವದೇ ಬಗೆಯ ನಿರ್ಬಂಧವಿಲ್ಲದೆ ಕೆಲಸ ನಿಭಾಯಿಸುವ ಸ್ವಾತಂತ್ರ್ಯ ನೀಡಿದ್ದಿದ್ದರೆ ಇಂದು ಕಾಶ್ಮೀರ ಸಮಸ್ಯೆಯೇ ಇರುತ್ತಿರಲಿಲ್ಲ ಎಂಬದು ಗಣ್ಯರ ಅಭಿಪ್ರಾಯ.
ಪದ್ಮಭೂಷಣ ಪ್ರಶಸ್ತಿ : 1950-51ರಲ್ಲಿ ಇವರು ಡೆಹರಾಡೂನ್ ಇಂಡಿಯನ್ ಮಿಲಿಟರಿ ಕಾಲೇಜಿನ ಕಮಾಡೆಂಟ್ ಆದರು. ಈ ಸಂಸ್ಥೆಯನ್ನು ತಿಮ್ಮಯ್ಯ ಅವರು ಇಂಗ್ಲೆಂಡಿನ ಸ್ಟ್ಯಾಂಡರ್ಸ್ ಹಾಗೂ ಅಮೇರಿಕಾದ ‘‘ವೆಸ್ಟ್ ಪಾಯಿಂಟ್’’ ಸಂಸ್ಥೆಯ ಸಮನಾಗಿ ಬೆಳೆಸಿದರು. ನಂತರ ಇವರು ಡೆಲ್ಲಿ ಆರ್ಮಿ ಹೆಡ್ ಕ್ವಾರ್ಟಸ್‍ನಲ್ಲಿ ‘‘ಕ್ವಾಟರ್ ಮಾಸ್ಟರ್ ಜನರಲ್’’ ಆದರು. 15-05-1953ರಲ್ಲಿ ವೆಸ್ಟರ್ನ್ ಕಮಾಂಡ್‍ನ ಮುಖ್ಯಸ್ಥರಾದರು. ಈ ಸಂದರ್ಭದಲ್ಲಿ ಕೊರಿಯಾ ದೇಶದಲ್ಲಿ ‘‘ನ್ಯೂಟ್ರಲ್ ನೇಶನ್ಸ್’’ ರಿಪ್ರಾಟ್ರಿಯೇಶನ್ ಕಮೀಷನ್’’ ಅಧ್ಯಕ್ಷರಾಗಿ ತುಂಬಾ ಕೆಲಸ ಮಾಡಿದರು. ಇವರ ಈ ಮಿಲಿಟರಿ ಸಾಧನೆಗೆ ಭಾರತ ಸರಕಾರ ಇವರಿಗೆ ‘‘ಪದ್ಮಭೂಷಣ’’ ಪ್ರಶಸ್ತಿ ನೀಡಿ ಗೌರವಿಸಿತು. ಆಗ ಇವರನ್ನು ‘‘ಮೆಕ್ ಅರ್ತೂರ್ ಆಫ್ ಇಂಡಿಯಾ’’ (ಒಅ ಂಡಿಣhuಡಿ oಜಿ Iಟಿಜiಚಿ) ಎಂದು ಪ್ರಪಂಚ ಮಟ್ಟದ ಮುಖಂಡರು ಕೊಂಡಾಡಿದರು.
ಮಿಲಿಟರಿ ಮುಖ್ಯಸ್ಥ : ಆ ನಂತರ ತಿಮ್ಮಯ್ಯ ಅವರು ಸದರ್ನ್ ಕಮಾಂಡ್‍ನ ಮುಖ್ಯಸ್ಥರಾಗಿಯೂ ಅಲ್ಲಿಂದ ಈಸ್ಟರ್ನ್ ಕಮಾಂಡ್‍ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು. ಹೀಗೆ ವೆಸ್ಟರ್ನ್ ಸದರ್ನ್ ಈಸ್ಟ್‍ನ ಈ ಮೂರು ವಿಭಾಗ ಮುಖ್ಯಸ್ಥರಾಗಿ (ಉ-ಔ-ಅ-iಟಿ-ಛಿ) ಕಾರ್ಯ ನಿರ್ವಹಿಸಿದ ಕೀರ್ತಿ ಇವರದು. 08-05-1957ರಲ್ಲಿ ಇವರು ಇಂಡಿಯನ್ ಆರ್ಮಿಯ ಮುಖ್ಯಸ್ಥ ಜನರಲ್ ಪದವಿಗೇರಿದರು. ಸುಮಾರು 4 ವರ್ಷ ಆರ್ಮಿ ಮುಖ್ಯಸ್ಥರಾಗಿ ಸಮರ್ಥ ಸೇವೆ ಮಾಡಿದ ಇವರು 1961ರಲ್ಲಿ ಸೇವೆಯಿಂದ ನಿವೃತ್ತರಾದರು. ಸುಮಾರು 35 ವರ್ಷಗಳ ಕಾಲ ಉನ್ನತ ಮಿಲಿಟರಿ ಅಧಿಕಾರಿಯಾಗಿ ಪ್ರಪಂಚದ ಮೂಲೆ ಮೂಲೆಯಲ್ಲಿ ಸೇವೆ ಮಾಡಿದ ಜನರಲ್ ತಿಮ್ಮಯ್ಯ 1961ನೇ ಇಸವಿ ಆದಿಭಾಗದಲ್ಲಿ ನಿವೃತ್ತಿಯಾಗಿ ಮಡಿಕೇರಿಯ ‘‘ಸನ್ನಿಸೈಡ್’’ ಮನೆಗೆ ಬಂದರು. 1961ನೇ ಸೆಪ್ಟೆಂಬರ್‍ನಲ್ಲಿ ಕಾನೂರ್ ಉಪಾಸಿ (Uಟಿiಣiಜ Pಟಚಿಟಿಣeಡಿs ಂssoಛಿiಚಿಣioಟಿ oಜಿ Souಣh Iಟಿಜiಚಿ-U.P.ಂ.S.I) ಸಂಸ್ಥೆಯ ಉಪಾಧ್ಯಕ್ಷರಾದರು.
ಸೈಪ್ರಸ್ ಗಲಭೆ : ಈ ಸಮಯದಲ್ಲಿ ಸೈಪ್ರಸ್ ದೇಶದಲ್ಲಿ ದೊಡ್ಡ ಗಲಾಟೆ ನಡೆಯುತ್ತಿತ್ತು. ಆಗ ಅಲ್ಲಿಯ ದಂಗೆ ಕೋರರ ಹುಟ್ಟಡಗಿಸಿ ಶಾಂತಿ ಕಾಪಾಡಲು, ವಿಶ್ವ ರಾಷ್ಟ್ರ ಸಂಸ್ಥೆಯ ಶಾಂತಿಪಾಲನಾ ಸಭೆಗೆ ಓರ್ವ ಸಮರ್ಥ ಮುಖ್ಯಸ್ಥರು ಬೇಕಾದರು. ಅದಕ್ಕಾಗಿ ವಿಶ್ವಮಟ್ಟದಲ್ಲಿ ತಡಕಾಡಿದಾಗ ಧೈರ್ಯ, ಸಾಹಸ, ಬುದ್ಧಿವಂತಿಕೆ, ತಾಳ್ಮೆ, ರಾಜನೀತಿ ಶಾಸ್ತ್ರ ಈ ಎಲ್ಲಾ ಬಗೆಯಲ್ಲಿಯೂ ಸಮರ್ಥ ವ್ಯಕ್ತಿಯಾಗಿ ಕಂಡವರು ಜನರಲ್ ತಿಮ್ಮಯ್ಯವರು. ಹೀಗಾಗಿ ಯು.ಎನ್.ಒ. ಸೆಕ್ರೆಟರಿ ಜನರಲ್ ಉಥಾಂಡ ಅವರು ತಿಮ್ಮಯ್ಯ ಅವರಿಗೆ ಜವಾಬ್ದಾರಿಯನ್ನು ಒಪ್ಪಿಸಿದರು. ಜನರಲ್ ತಿಮ್ಮಯ್ಯ ಅವರು ಯು.ಎನ್.ಓ. ಪೀಸ್ ಫೋರ್ಸ್‍ನ ಕಮಾಂಡರ್ ಆಗಿ ಸೈಪ್ರಸ್ ದೇಶಕ್ಕೆ ಹೋದರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ತನ್ನ ಶಕ್ತಿ-ಯುಕ್ತಿ-ಸಾಮಥ್ರ್ಯಗಳಿಂದ ದಂಗೆಕೋರರ ಸದ್ದಡಗಿಸಿ ಸೈಪ್ರಸ್‍ನಲ್ಲಿ ಶಾಂತಿ ಸ್ಥಾಪನೆ ಮಾಡಿದರು. ಇವರ ಈ ಸಾಧನೆಯನ್ನು ಇಡೀ ಪ್ರಪಂಚವೇ ಮೆಚ್ಚಿಕೊಂಡಾಡಿತು. ಈ ಸಂದರ್ಭದಲ್ಲಿ ತಿಮ್ಮಯ್ಯ ಅವರನ್ನು ಮೆಚ್ಚಿದ ಒಂದು ವರದಿ ಹೀಗೆ ಇತ್ತು. ‘‘I heಚಿಡಿಜ ಟಿoಣhiಟಿg buಣ ಠಿಡಿಚಿise ಜಿoಡಿ geಟಿeಡಿಚಿಟ ಖಿhimmಚಿiಚಿh’s ಛಿooಟ bಡಿಚಿveಡಿಥಿ ಚಿಟಿಜ ಜiಠಿಟomಚಿಣiಛಿ sಚಿgಚಿಛಿiಣಥಿ ಅಥಿಠಿಡಿus ಛಿoಟಿಣiಟಿueಜ ಣo ಡಿemಚಿiಟಿ ಚಿಣ ಠಿeಚಿಛಿe. iಣ ತಿಚಿs ಟಚಿಡಿgeಟಥಿ beಛಿಚಿuse oಜಿ ಣhe moಡಿಚಿಟ sಣಚಿಟಿಜiಟಿg oಜಿ ಣhe U.ಓ. Peಚಿಛಿe ಈoಡಿಛಿe ಚಿಟಿಜ ಣhe ಛಿhಚಿಡಿm oಜಿ iಣs ಛಿommಚಿಟಿಜeಡಿs ಜಿoಡಿmiಜಚಿbಟe ಠಿeಡಿsoಟಿಚಿಟiಣಥಿ’’
ಕಣ್ಮರೆ : ಹೀಗೆ ಕೀರ್ತಿಯ ಉತ್ತುಂಗದಲ್ಲಿದ್ದ ಜನರಲ್ ತಿಮ್ಮಯ್ಯ 18-19-1965ರಲ್ಲಿ ನಿಕೋಸಿಯಾದ ತನ್ನ ಬಂಗಲೆಯಲ್ಲಿ ಹೃದಯಾಘಾತ ದಿಂದ ಮರಣಪಟ್ಟರು. ಸುಮಾರು 35 ವರ್ಷ ವೀರ ಸೈನ್ಯಾಧಿಕಾರಿಯಾಗಿದ್ದು, 56ನೇ ವಯಸ್ಸಿನಲ್ಲಿ ಕಣ್ಮರೆಯಾದರು. ಇವರ ಈ ಮರಣ ಇಡೀ ವಿಶ್ವ ಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಪ್ರಪಂಚದ ಎಲ್ಲಾ ಮುಖ್ಯಸ್ಥರು ಜನರಲ್ ತಿಮ್ಮಯ್ಯನವರ ಸೇವೆ, ಸಾಧನೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಸೈಪ್ರಸ್ ದೇಶ ಈ ವೀರ ಸೇನಾನಿಯ ಗೌರವಾರ್ಥ 06-06-1966ರಲ್ಲಿ ಒಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.
ಸ್ಮಾರಕ : ಜನರಲ್ ತಿಮ್ಮಯ್ಯ ಅವರ ಪಾರ್ಥಿವ ಶರೀರವನ್ನು ಶುರುವಿಗೆ ಬೆಂಗಳೂರು ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಆ ನಂತರ ಜನರ ಒತ್ತಾಯಕ್ಕೆ ಮಣಿದು ಬೆಂಗಳೂರು ಎ. ಎಸ್. ಸಿ. ಆರ್ಮಿ ಯೂನಿಟ್‍ನಲ್ಲಿ ಪ್ರತ್ಯೇಕ ಸಮಾಧಿ ಮಾಡಲಾಯಿತು. ಹಾಗೂ ಅಲ್ಲಿ ತಿಮ್ಮಯ್ಯ ಅವರ ಒಂದು ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಮಡಿಕೇರಿ ಟೋಲ್‍ಗೇಟ್‍ನಲ್ಲಿ ಜನರಲ್ ತಿಮ್ಮಯ್ಯ ಅವರ ಆಳೆತ್ತರದ ಕಂಚಿನ ಪ್ರತಿಮೆ ಇದೆ. ಮಡಿಕೇರಿ, ಮೈಸೂರು, ಬೆಂಗಳೂರು, ಡೆಲ್ಲಿ, ಅಲಹಾಬಾದ್, ಡೆಹರಾಡೂನ್, ಇಂತಹ ಸ್ಥಳಗಳಲ್ಲಿ ಜನರಲ್ ತಿಮ್ಮಯ್ಯ ರಸ್ತೆ, ಸರ್ಕಲ್ ರಸ್ತೆ, ಉಪನಗರ, ಕಟ್ಟಡ ಮೊದಲಾದವುಗಳಿವೆ. ಪ್ರಪಂಚ ಖ್ಯಾತಿಯ ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ಕಣ್ಮರೆಯಾಗಿ ಇಂದಿಗೆ 111 ವರ್ಷಗಳು. ಅವರ ಸೇವೆ, ಸಾಧನೆ, ಶಿಸ್ತು, ಗತ್ತು, ಕೀರ್ತಿ ಎಂದಿಗೂ ಮರೆಯಾಗುವಂತದ್ದಲ್ಲ. ಇವರ ಜೀವನ ಚರಿತ್ರೆ ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶನವಾಗಿರಲಿ.