ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ

ತುಮಕೂರು, ಮಾ. 30: ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವವನ್ನು ಏ.1ರಂದು ಮಠದ ಆವರಣದಲ್ಲಿ ಆಯೋಜಿಸಲಾಗಿದೆ’ ಎಂದು ಸಿದ್ದಗಂಗಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಡಾ. ಎಂ.ಎನ್. ಚನ್ನಬಸಪ್ಪ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 10.30ಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಮೈಸೂರು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆವಹಿಸಲಿದ್ದಾರೆ’ ಎಂದು ಹೇಳಿದರು. ‘ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರು ‘ಸಂದೇಶಸಿರಿ’ ಗ್ರಂಥ ಬಿಡುಗಡೆ ಮಾಡುವರು. ಸಿದ್ದಗಂಗಾಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ನುಡಿನಮನ ಸಲ್ಲಿಸಲಿದ್ದಾರೆ’ ಎಂದು ತಿಳಿಸಿದರು. ‘ಸ್ವಾಮೀಜಿಯವರ ಜನ್ಮದಿನೋತ್ಸವ ಪ್ರಯುಕ್ತ ಈ ವರ್ಷ ಮಠದ ಆವರಣದಲ್ಲಿ 7 ಕಡೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ದಾಸೋಹ ನಡೆಯಲಿದೆ’ ಎಂದರು.

ಬಾಲ್ಯ ಸ್ನೇಹಿತೆಯನ್ನು ವಿವಾಹವಾದ ಬೌದ್ಧ ಗುರು

ನವದೆಹಲಿ, ಮಾ. 30: ಟಿಬೆಟಿಯನ್ನರ ಹಿರಿಯ ಬೌದ್ಧ ಗುರುವೊಬ್ಬರು ಸನ್ಯಾಸತ್ವ ತ್ಯಜಿಸಿ ಭಾರತದಲ್ಲಿ ತಮ್ಮ ಬಾಲ್ಯ ಸ್ನೇಹಿತೆಯನ್ನು ವಿವಾಹವಾಗಿದ್ದಾರೆ. 33 ವರ್ಷದ ಬೌದ್ಧ ಗುರು ತಾಯೆ ದೊರ್ಜೆ ಟಿಬೆಟಿಯನ್ ಧಾರ್ಮಿಕ ಪ್ರಮುಖ ನಾಲ್ಕು ಶಾಲೆಗಳಲ್ಲಿ ಒಂದು ಶಾಲೆಯ ಗುರುಗಳಾಗಿದ್ದು ಕರ್ಮಪಾ ಲಾಮಾ ಅವರ ಪುನರ್ಜನ್ಮ ಎಂದು ಹೇಳಲಾಗುತ್ತಿತ್ತು. ಆದರೆ ಕರ್ಮ ಕಾಗ್ಯು ಬೌದ್ಧ ಶಾಲೆಯ ಹಲವು ಅನುಯಾಯಿಗಳು ದಲೈಲಾಮಾ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರತಿಸ್ಪರ್ಧಿಯಾದ ಉರ್ಜಿನ್ ಟ್ರಿನ್ಲೆ ಎಂಬ ಶಿರೋನಾಮೆ ಇಟ್ಟುಕೊಂಡಿದ್ದವರೊಂದಿಗೆ ಗುರುತಿಸಿಕೊಂಡಿದ್ದರು. ಈ ಭಿನ್ನಾಭಿಪ್ರಾಯಗಳುಂಟಾಗಿ ಟಿಬಿಟಿಯನ್ ಬೌದ್ಧಗುರುಗಳು ಇಬ್ಭಾಗವಾಗಿ ಅನೇಕ ವರ್ಷಗಳಾಗಿದ್ದವು. ಇಂದು ತಾಯೆ ದೊರ್ಜೆಯವರ ಕಚೇರಿ ಆಶ್ಚರ್ಯಕರ ಸಂಗತಿಯನ್ನು ಘೋಷಿಸಿದ್ದು, ಮೊನ್ನೆ ಮಾರ್ಚ್ 25 ರಂದು ದೆಹಲಿಯಲ್ಲಿ ಖಾಸಗಿ ಸಮಾರಂಭದಲ್ಲಿ ಗುರು ದೊರ್ಜೆಯವರು ವಿವಾಹವಾಗಿ ಸನ್ಯಾಸತ್ವವನ್ನು ತ್ಯಜಿಸಿರುವದಾಗಿ ಘೋಷಿಸಿತು. ನಾನು ಮದುವೆ ಮಾಡಿಕೊಂಡ ನಿರ್ಧಾರ ನನ್ನಲ್ಲಿ ಮಾತ್ರವಲ್ಲದೆ ನನ್ನ ಅನುಯಾಯಿಗಳ ಮೇಲೆ ಕೂಡ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ದೃಢ ವಿಶ್ವಾಸ ನನಗಿದೆ. ಕೆಲವು ಸುಂದರವಾದ ಪ್ರಯೋಜನವಾಗುವ ವಿಷಯಗಳು ನಮ್ಮೆಲ್ಲರಲ್ಲಿ ಮೂಡಲಿದೆ ಎಂದು ಹೇಳಿದ್ದಾರೆ.

ಅಪರಾಧ ತಡೆ: ಶೇ. 90 ರಷ್ಟು ಪೆÇಲೀಸರ ಗಸ್ತು

ಬೆಂಗಳೂರು, ಮಾ. 30: ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯುವ ಸಲುವಾಗಿ ಕರ್ನಾಟಕ ಪೆÇಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ ಅವರು ಹೊಸ ಆದೇಶವನ್ನು ಹೊರಡಿಸಿದ್ದು ಇದರ ಅನ್ವಯ ಶೇ. 90 ರಷ್ಟು ಪೆÇಲೀಸರು ಗಸ್ತು ತಿರುಗಬೇಕಿದೆ. ಪೆÇಲೀಸ್ ಬೀಟ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದ್ದು, ಇನ್ನು ಮುಂದೆ ಶೇ. 90 ರಷ್ಟು ಪೆÇಲೀಸರು ಗಸ್ತು ತಿರುಗಬೇಕಿದೆ. ಪ್ರದೇಶಕೊಬ್ಬ ಪೆÇಲೀಸ್ ತತ್ವದಡಿಯಲ್ಲಿ ಬೀಟ್ ವ್ಯವಸ್ಥೆ ಜಾರಿಗೆ ಬರಲಿದೆ. ಪೇದೆ ಮತ್ತು ಮುಖ್ಯ ಪೇದೆ ಸಂಖ್ಯೆಗೆ ಅನುಗುಣವಾಗಿ ಗಸ್ತು ತಿರುಗುವ ವ್ಯವಸ್ಥೆಗೆ ರಾಜ್ಯ ಪೆÇಲೀಸ್ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆÇಲೀಸರು ತಮಗೆ ವಹಿಸಿರುವ ಜವಾಬ್ದಾರಿಯ ಜತೆಗೆ ಗುಸ್ತು ತಿರುಗಬೇಕಿದೆ. ಅಲ್ಲದೆ ರಾತ್ರಿ ವೇಳೆಯೂ ವಿಶೇಷ ಬೀಟ್ ವ್ಯವಸ್ಥೆಗೆ ನಿರ್ಧಾರ ಕೈಗೊಳ್ಳಲಾಗಿದ್ದು. ಪ್ರತಿ ಬೀಟ್‍ನಲ್ಲಿಯೂ ನಾಗರಿಕರ ಸದಸ್ಯರೊಬ್ಬರನ್ನು ನೇಮಕ ಮಾಡಲಾಗುತ್ತದೆ. ಬಳಿಕ ತಿಂಗಳಿಗೊಮ್ಮೆ ಬೀಟ್ ಪೆÇಲೀಸ್ ಮತ್ತು ನಾಗರಿಕ ಸದಸ್ಯರ ಜತೆ ಆಯಾ ಠಾಣಾಧಿಕಾರಿಗಳ ಸಮ್ಮುಖದಲ್ಲೇ ಸಭೆ ನಡೆಯಲಿದೆ ಎಂದು ಆರ್.ಕೆ. ದತ್ತಾ ಅವರು ಹೇಳಿದ್ದಾರೆ.

ತ್ರಿವಳಿ ತಲಾಖ್: ಮೇ 11 ರಿಂದ ವಿಚಾರಣೆ ಆರಂಭ

ನವದೆಹಲಿ, ಮಾ. 30: ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 5 ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಿದ್ದು, ಮೇ 11 ರಿಂದ ವಿಚಾರಣೆ ಪ್ರಾರಂಭವಾಗಲಿದೆ. ಪಂಚ ಸದಸ್ಯ ಪೀಠಕ್ಕೆ ತ್ರಿವಳಿ ತಲಾಖ್ ಪ್ರಕರಣವನ್ನು ವರ್ಗಾಯಿಸುವ ಬಗ್ಗೆ ಸುಪ್ರೀಂ ಕೋರ್ಟ್ ಕಳೆದ ತಿಂಗಳೇ ಸುಳಿವು ನೀಡಿತ್ತು. ತ್ರಿವಳಿ ತಲಾಖ್ ಕಾನೂನು ಬಾಹೀರವಾಗಿದ್ದು, ಅಲ್ಪಸಂಖ್ಯಾತ ಮಹಿಳೆಯರ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಬಗ್ಗೆ ದೇಶಾದ್ಯಂತ ಚರ್ಚೆ ನಡೆದಿತ್ತು. ತ್ರಿವಳಿ ತಲಾಖ್ ಪದ್ಧತಿಯನ್ನು ವಿರೋಧಿಸುವದಾಗಿ ಕೇಂದ್ರ ಸರ್ಕಾರ ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ಲಿಂಗ ತಾರತಮ್ಯವನ್ನು, ಸಹಿಸುವದಿಲ್ಲ ಎಂದು ಕೋರ್ಟ್‍ಗೆ ಹೇಳಿದೆ. ಇನ್ನು ನಿಖಾಹ್ ಹಲಾಲ್ (ಒಬ್ಬ ಪುರುಷ ತನ್ನ ವಿಚ್ಛೇದಿತ ಪತ್ನಿಯನ್ನು ಪುನಃ ವಿವಾಹವಾಗಬೇಕಾದರೆ, ಆಕೆ ಬೇರೊಬ್ಬರೊಂದಿಗೆ ಎರಡನೇ ಮದುವೆಯಾಗಿರಬೇಕು ಎಂಬ ಪದ್ಧತಿ) ಕುರಿತಾಗಿಯೂ ಸುಪ್ರೀಂ ಕೋರ್ಟ್‍ನ ಪಂಚ ಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ. ತ್ರಿವಳಿ ತಲಾಖ್ ಪರವಾಗಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದಿಸುತ್ತಿದ್ದು, ತ್ರಿವಳಿ ತಲಾಖ್‍ನ್ನು ರದ್ದುಗೊಳಿಸಿದರೆ ಅದು ಕುರಾನ್‍ಗೆ ಮಾಡುವ ಅಪಚಾರವಾಗಿದೆ ಎಂದು ಹೇಳುತ್ತಿದೆ.

ವಿಷಾನಿಲ ಸೇವಿಸಿ ಐವರು ಕಾರ್ಮಿಕ ಸಾವು

ವಿಜಯವಾಡ, ಮಾ. 30: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ವಿಷಾನಿಲ ಸೇವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಮೊಗಾಳ್ಥುರ್‍ನಲ್ಲಿ ಆಕ್ವಾ ಆಹಾರ ಸಂಸ್ಕರಣಾ ಘಟಕದಲ್ಲಿ ರಾಸಾಯನಿಕ ಕೊಳವನ್ನು ಸ್ವಚ್ಛಗೊಳಿಸುವಾಗ ಈ ಘಟನೆ ನಡೆದಿದೆ. ಈ ಐವರು ವಿಷಾನಿಲ ಸೇವಿಸಿ ಮೃತಪಟ್ಟಿದ್ದಾರೆಯೇ ಅಥವಾ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಸತ್ತಿದ್ದಾರೆಯೇ ಎಂದು ಪತ್ತೆಹಚ್ಚಲು ತನಿಖೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟಕದ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸಂತ್ರಸ್ತರ ಕುಟುಂಬ ವರ್ಗ ಆರೋಪಿಸಿದೆ.

ಬಿಸಿಲಿನ ಝಳಕ್ಕೆ ಕಾಡಾನೆ ಸಾವು

ರಾಮನಗರ, ಮಾ. 30: ಬಿಸಿಲಿನ ಝಳ ತಾಳ ಲಾರದೆ 10 ವರ್ಷ ವಯಸ್ಸಿನ ಗಂಡಾನೆಯೊಂದು ಮೃತಪಟ್ಟ ಘಟನೆಯು ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಬಿಸಿಲಿನಿಂದಾಗಿ ಆನೆಯು ನಿತ್ರಾಣಗೊಂಡಿದ್ದು, ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಾಡಿನಲ್ಲಿ ನೀರಿನ ಮೂಲ ಬತ್ತಿವೆ. ತಿನ್ನಲು ಆಹಾರವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಕಾಡಂಚಿನ ಜನ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಕಾಡು ನಾಶವಾಗುತ್ತಿದೆ. ಮೂಕ ಪ್ರಾಣಿಗಳು ನೀರು, ಆಹಾರಕ್ಕಾಗಿ ಅಲೆಯುವಂತಾಗಿದೆ. ಬದುಕಿಗಾಗಿ ಹೋರಾಟ ನಡೆಸುತ್ತಿವೆ.