ಶನಿವಾರಸಂತೆ, ಮಾ. 30: ಜನಪದ ಆಕರಗಳು ಇತಿಹಾಸ ಕಾರರಿಗೆ ವರಪ್ರಸಾದ ಎಂದು ಕ.ಸಾ.ಪ. ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್. ಅಬ್ದುಲ್ ರಬ್ ಹೇಳಿದರು.

ಕೊಡ್ಲಿಪೇಟೆ ಸಮೀಪದ ಕಲ್ಲುಮಠದ ಎಸ್.ಕೆ.ಎಸ್. ಪ್ರೌಢ ಶಾಲೆಯಲ್ಲಿ ಜಾನಪದ ಕಲೆ, ಸಂಸ್ಕøತಿ ಬೆಳವಣಿಗೆ ಕುರಿತ ಡಿ.ಜೆ. ಪದ್ಮನಾಭ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲ್ಲುಮಠದ ಮಹಾಂತ ಸ್ವಾಮೀಜಿ, ಹಿಂದೆ ದೊರೆಗಳ ದತ್ತಿ ನೀಡಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು. ಜಾನಪದ ಸಾಹಿತ್ಯ, ಕಲೆಯ ಬೆಳವಣಿಗೆ, ಅಭಿವೃದ್ಧಿ ಕುರಿತು ಉಪನ್ಯಾಸ ನೀಡಿದ ಕ.ಸಾ.ಪ. ಜಿಲ್ಲಾ ಘಟಕದ ಕವನ್ ಕಾರ್ಯಪ್ಪ, ಅನಕ್ಷರಸ್ಥರೇ ಜಾನಪದ ಸಾಹಿತ್ಯದ ಹರಿಕಾರರು ಎಂದರು.

ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಕೊಡ್ಲಿಪೇಟೆಯಲ್ಲಿ ಶೀಘ್ರ ಸುಗ್ಗಿ ಸಂಪದ ಕಾರ್ಯಕ್ರಮ ಆಯೋಜಿಸಲಾಗುವದು ಎಂದು ತಿಳಿಸಿದರು. ಜಾನಪದ ಕಲಾವಿದ ಬೆಸೂರು ಶಾಂತೇಶ್, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಜವರಪ್ಪ, ಡಿ. ಭಗವಾನ್, ಹೆಚ್.ಎಂ. ದಿವಾಕರ, ಜಿ.ಆರ್. ಸುಬ್ರಮಣ್ಯ ಮಾತನಾಡಿದರು. ಹೋಬಳಿ ಘಟಕದ ನಿರ್ದೇಶಕರಾದ ಕವಿತಾ, ಸತೀಶ್, ಮಹಮ್ಮದ್ ಫಯಾಜ್ ಉಪಸ್ಥಿತರಿದ್ದರು. ಕವಿತಾ ಕಾರ್ಯಕ್ರಮ ನಿರೂಪಿಸಿದರು.