ಕುಶಾಲನಗರ, ಮಾ. 30: ಪಂಚಾಯಿತಿ ಪೌರಕಾರ್ಮಿಕರ ಕುಟುಂಬ ಸದಸ್ಯರ ಭದ್ರತೆಗೆ ಶಾಶ್ವತ ಯೋಜನೆಗಳು ರೂಪುಗೊಳ್ಳು ವಂತಾಗಬೇಕೆಂದು ಬಿಎಸ್ಆರ್ ಗ್ರೂಪ್ಸ್ನ ಮುಖ್ಯಸ್ಥ ಡಿ.ಎಸ್. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಗಾದಿ ಹಬ್ಬದ ಅಂಗವಾಗಿ ಬಿಎಸ್ಆರ್ ಗ್ರೂಪ್ಸ್ ಮತ್ತು ಬಿಎಸ್ಆರ್ ಸ್ಟೋನ್ ಕ್ರಷರ್ಸ್ ಸಂಸ್ಥೆಯ ಕಚೇರಿಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿಯ 40 ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ಬಟ್ಟೆ, ಆಹಾರ ಸಾಮಗ್ರಿ ಹಾಗೂ ಕಾರ್ಮಿಕರಿಗೆ ತಲಾ ರೂ. 20 ಲಕ್ಷಗಳ ವಿಮಾ ಪಾಲಿಸಿ ಒದಗಿಸಿ ಮಾತನಾಡಿದರು.
ಪಟ್ಟಣದ ಆರೋಗ್ಯದತ್ತ ದಿನನಿತ್ಯ ಕಾರ್ಯೋನ್ಮುಖರಾಗುವ ಪೌರ ಕಾರ್ಮಿಕರ ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾಗಿದೆ ಎಂದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಹಬ್ಬ-ಹರಿದಿನಗಳಂದು ಕಾರ್ಮಿಕರನ್ನು ಗುರುತಿಸಿ ಗೌರವಿಸುವದು ಉತ್ತಮ ಕಾರ್ಯ ಎಂದರು. ಈ ಸಂದರ್ಭ ಡಿ.ಜೆ. ಯಶೋದ, ಡಾ. ಡಿ.ಜೆ. ಸುಷ್ಮಿತಾ, ಡಿ.ವಿ. ರಮೇಶ್ ಇದ್ದರು.