ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೊಸ ಕಾಯ್ದೆ ರೂಪಿಸಿರುವ ಸುಪ್ರೀಂಕೋರ್ಟ್, ಇನ್ನು ಮಂದೆÉ ಬಿಎಸ್-Iಗಿ ಮೇಲ್ಪಟ್ಟ ಇಂಜಿನ್ ಸಾಮಥ್ರ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡುವಂತೆ ಆದೇಶ ಹೊರಡಿಸಿದೆ. ಬಿಎಸ್-3 ಸಾಮಥ್ರ್ಯದ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ.

ಹೀಗಾಗಿ ಸದ್ಯ ಚಾಲ್ತಿಯಲ್ಲಿರುವ ಬಿಎಸ್-3 ಎಂಜಿನ್ ವಾಹನಗಳನ್ನು ಹೊರತುಪಡಿಸಿ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಇದರಿಂದ ನಿಗದಿತ ಪ್ರಮಾಣದಲ್ಲಿ ವಾಯುಮಾಲಿನ್ಯ ತಗ್ಗಲಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ವಾಹನ ಉತ್ಪಾದಕರಿಗೆ ಖಡಕ್ “ವಾರ್ನ್” ಮಾಡಿರುವ ಸುಪ್ರೀಂಕೋರ್ಟ್, ಬಿಎಸ್-3 ಇಂಜಿನ್ ಸಾಮಥ್ರ್ಯದ ವಾಹನಗಳನ್ನು ಇಂದಿನಿಂದಲೇ ಮಾರಾಟ ಮಾಡದಂತೆ ಆದೇಶ ಹೊರಡಿಸಿದೆ.

ಈಗಾಗಲೇ ಕೆಲವು ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಹೊಸ ರೂಲ್ಸ್ ಅಳವಡಿಸಿಕೊಳ್ಳುವ ಮೂಲಕ ಬಿಎಸ್-Iಗಿ ಎಂಜಿನ್ ಸಾಮಥ್ರ್ಯದ ವಾಹನಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿವೆ. ಆದರೂ ಈ ಹಿಂದೆ ‘ಸ್ಟಾಕ್’ ಮಾಡಿಕೊಂಡಿರುವ ಕೆಲವು ಉತ್ಪಾದಕರು ಗ್ರಾಹಕರಿಗೆ ‘ಆಫರ್’ ನೀಡುವ ಮೂಲಕ ಬಿಎಸ್-3 ಎಂಜಿನ್ ವಾಹನಗಳನ್ನೇ ಮಾರಾಟ ಮಾಡುತ್ತಿದ್ದಾರೆ.

ಏಪ್ರಿಲ್ ನಂತರ ಬಿಎಸ್-3 ಎಂಜಿನ್ ಹೊಸ ವಾಹನಗಳು ಮೂಲೆ ಗುಂಪಾಗಲಿದ್ದು, ಇವುಗಳನ್ನು ಈಗಲೇ ಮಾರಾಟಗೊಳಿಸಲು ಕೆಲವು ವಾಹನ ಉತ್ಪಾದಕರು ಮತ್ತು ‘ಡೀಲರ್’ ಹತ್ತಾರು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹೀಗಾಗಿ ವಾಹನ ಖರೀದಿದಾರರಿಗೂ ಇದೀಗ ಸುಗ್ಗಿ ಕಾಲ ಎಂದೇ ಹೇಳಬಹುದು.

ಸುಪ್ರೀಂಕೋರ್ಟ್‍ನ ಹೊಸ ಕಾಯ್ದೆಯಿಂದಾಗಿ ಸುಮಾರು 20 ಸಾವಿರ ಕಾರುಗಳು, 7 ಲಕ್ಷ 50 ಸಾವಿರ ಬೈಕ್‍ಗಳು ಮತ್ತು 47 ಸಾವಿರ ಮೂರು ಚಕ್ರದ ವಾಹನಗಳು ಸದ್ಯದಲ್ಲೇ ಮೂಲೆಗುಂಪಾಗಲಿವೆ. ಇವುಗಳನ್ನು ಯಾವುದೇ ಕಾರಣಕ್ಕೂ ಆಫರ್‍ಗಳ ಮೂಲಕ ಮಾರಾಟ ಮಾಡದಂತೆ ಸುಪ್ರೀಂ ಖಡಕ್ ಸೂಚನೆ ನೀಡಿದೆ.

ಕೇವಲ ಬಿಎಸ್-Iಗಿ ಎಂಜಿನ್ ಕಡ್ಡಾಯ ಮಾತ್ರವಲ್ಲದೇ ಂಊಔ(ಅಟೋಮೆಟಿಕ್ ಹೆಡ್‍ಲೈಟ್ ಆನ್) ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಿರಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಇನ್ನು ಮುಂದೆ ಬಿಎಸ್-Iಗಿ ಎಂಜಿನ್ ಮತ್ತು ಂಊಔ(ಆಟೋಮೆಟಿಕ್ ಹೆಡ್‍ಲ್ಯಾಂಪ್ ಆನ್) ವ್ಯವಸ್ಥೆ ಇಲ್ಲದ ಯಾವುದೇ ವಾಹನಗಳ ಮಾರಾಟ ಮತ್ತು ಉತ್ಪಾದನೆ ಎಲ್ಲವೂ ಬಂದ್ ಆಗಲಿದೆ.

ಒಂದು ವೇಳೆ ನೀವು ಈ ಮೇಲಿನ ಎರಡು ವ್ಯವಸ್ಥೆಗಳು ಇಲ್ಲದ ವಾಹನಗಳನ್ನು ಖರೀದಿ ಮಾಡಿದರೂ ಆರ್‍ಟಿಓಗಳಲ್ಲಿ ಇವುಗಳನ್ನು ನೋಂದಣಿ ಮಾಡಿಕೊಳ್ಳಲಾಗುವುದಿಲ್ಲ. ಅಲ್ಲದೇ ಅವುಗಳಿಗೆ ಮಾನ್ಯತೆ ಕೂಡಾ ಇರುವುದಿಲ್ಲ. ಹೀಗಾಗಿ ಖರೀದಿಗೂ ಮುನ್ನ ಈ ವಿಚಾರಗಳನ್ನು ತಿಳಿದುಕೊಂಡೇ ವಾಹನಗಳನ್ನು ಆಯ್ಕೆ ಮಾಡಿ.

ವಾಯು ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂಕೋರ್ಟ್ ಈ ಹೊಸ ‘ರೂಲ್ಸ್’ ಜಾರಿಗೆ ತರುತ್ತಿದ್ದು, ಅದು ಎಷ್ಟರ ಮಟ್ಟಿಗೆ ‘ಸಕ್ಸಸ್’ ಆಗುತ್ತೋ ಗೊತ್ತಿಲ್ಲ. ಆದರೆ, ಹೊಸ ಕಾಯ್ದೆಯಿಂದ ಈಗಾಗಲೇ ಉತ್ಪಾದನೆಗೊಂಡಿರುವ ಲಕ್ಷಾಂತರ ಬಿಎಸ್-3 ಎಂಜಿನ್ ವಾಹನಗಳು ಮೂಲೆ ಗುಂಪಾಗುವುದು ಮಾತ್ರ ಖಂಡಿತ!

-ವ್ಯಾಟ್ಸಾಪ್ ಸುದ್ದಿ