ಶನಿವಾರಸಂತೆ, ಮಾ. 30: ಶನಿವಾರಸಂತೆ ಗ್ರಾಮ ಪಂಚಾಯಿತಿಗೆ 2017-18 ನೇ ಸಾಲಿನಲ್ಲಿ ವಿವಿಧ ಅದಾಯ ಮೂಲದಿಂದ ರೂ. 1,16,933 ಅಧಿಕ ಲಾಭ ದೊರೆತಿದೆ. ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅವರ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.

ಕಳೆದ ಸಾಲಿನಲ್ಲಿ ಹಸಿಮಿನು ಮಾರುಕಟ್ಟೆ ರೂ. 3.60 ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 4,61,333 ಲಕ್ಷಕ್ಕೆ ಹರಾಜಾಗಿದ್ದು, ರೂ. 1,01,333 ಲಕ್ಷ ಲಾಭ ದೊರೆತಿದೆ. ಹಂದಿ ಮಾಂಸ ಮಾರುಕಟ್ಟೆ ಕಳೆದ ಸಾಲಿನಲ್ಲಿ ರೂ. 1.11 ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ 1,22,100 ರೂ.ಗಳಿಗೆ ಹರಾಜಾಗಿ, ರೂ. 11,100 ಲಾಭ ಬಂದಿದೆ.

ಬಸ್ ನಿಲ್ದಾಣ ಶುಲ್ಕ ಕಳೆದ ಸಾಲಿನಲ್ಲಿ ರೂ. 33,500 ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 38,000 ಕ್ಕೆ ಹರಾಜಾಗಿದ್ದು, ರೂ. 4500 ಲಾಭ ಬಂದಿದೆ. ಸಂತೆ ಸುಂಕ ಎತ್ತುವಳಿ ಕಳೆದ ಸಾಲಿನಲ್ಲಿ ರೂ. 7.20 ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ಕಡಿಮೆ ಬಿಡ್ ಆದುದರಿಂದ ಬಿಡ್ಡನ್ನು ಆಡಳಿತ ಮಂಡಳಿ ನಿರಾಕರಿಸಿ ಮರು ಟೆಂಡರ್‍ಗೆ ಆದೇಶ ಮಾಡಿದೆ.

ಹರಾಜಯ ಪ್ರಕ್ರಿಯೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ರಜನಿ, ಉಷಾ, ಹೇಮ, ಸರ್ದಾರ್ ಆದಿತ್ಯಗೌಡ, ಪಾಂಡು, ಹರೀಶ್, ಕಾರ್ಯದರ್ಶಿ ತಮ್ಮಯ್ಯಾಚಾರ್, ಲೆಕ್ಕಾಧಿಕಾರಿ ಹರಿಣಿ, ಬಿಲ್‍ಕಲೆಕ್ಟರ್ ವಸಂತ ಹಾಗೂ ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ, ವಂದಿಸಿದರು.