ಮಡಿಕೇರಿ, ಮಾ. 30: ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ, ದೇವರ ನೃತ್ಯ ಬಲಿ ಹಾಗೂ ಕೋಲಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಗ್ರಾಮ ದೇವತೆ ಶ್ರೀ ಭಗವತಿ ದೇವರ ಉತ್ಸವ ವಿವಿಧ ಪÀÇಜಾ ಕಾರ್ಯ, ಕೊಡಗಿನ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಬೊಳಕಾಟ್, ಎತ್ತು ಪೋರಾಟಗಳೊಂದಿಗೆ ಆಚರಿಸಲ್ಪಟ್ಟಿತು.
ತೆಂಗಿನ ಕಾಯಿಗಳಿಗೆ ಗುಂಡು ಒಡೆಯುವ ಮೂಲಕ ಹಬ್ಬದ ಕಟ್ಟನ್ನು ಮುರಿಯಲಾಯಿತು. ‘ತೆಂಗೆ ಪೋರ್’ ಕ್ರೀಡೆ ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ದೇವರ ದರ್ಶನ ಬಲಿ, ಮುಡಿ ಕೋಲ, ಅಯ್ಯಪ್ಪ, ಅಜ್ಜಪ್ಪ, ಕುಟ್ಟಿಚಾತ ಕೋಲಗಳ ಪ್ರದಕ್ಷಿಣೆ ನಡೆಯಿತು.
ದೇವಸ್ಥಾನದಲ್ಲಿ ದೇವರ ಬಲಿ, ಕಲಶ ಪೂಜೆಗಳೊಂದಿಗೆ ಉತ್ಸವಕ್ಕೆ ತೆರೆ ಬಿತ್ತು. ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.