ಚೆಟ್ಟಳ್ಳಿ, ಮಾ. 30: ಸಹಕಾರ ಸಂಘದಲ್ಲಿ ಒಗ್ಗಟ್ಟು ಮುಖ್ಯ. ಅಂತಹ ಸಹಕಾರ ಸಂಘಗಳಲ್ಲಿ ಒಂದಾದ ಚೆಟ್ಟಳ್ಳಿಯ ಕೃಷಿಪತ್ತಿನ ಸಹಕಾರ ಸಂಘ ಮಾದರಿಯಾಗಿದೆ ಎಂದು ಚೆಟ್ಟಳ್ಳಿಯ ಸಹಕಾರ ಸಂಘದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಹೆಚ್.ಟಿ. ಅನಿಲ್ ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ ಮಡಿಕೇರಿಯ ವಕೀಲ ಎಂ.ಈ. ಮೋಹನ್ ಕುಮಾರ್ ಮಾತನಾಡಿ, ಚೆಟ್ಟಳ್ಳಿಯ ಸಹಕಾರ ಸಂಘವು ಉತ್ತಮ ಕಾರ್ಯವನ್ನು ಮಾಡುತ್ತಿದ್ದು ಇದು ಮುಂದಿನ ಪೀಳಿಗೆಗೆ ಮಾರ್ಗದರ್ಶ ವಾಗಿದೆ ಎಂದರು. ಶ್ರೀ ಶಕ್ತಿ ಕೂಟದ ಜಿಲ್ಲಾಧ್ಯಕ್ಷೆ ಮೇರಿ ಅಂಬುದಾಸ್ ಮಾತನಾಡಿ ಚೆಟ್ಟಳ್ಳಿಯ ಸಹಕಾರ ಸಂಘವು ಉತ್ತಮಸೇವೆ ಒದಗಿಸುತ್ತಿರುವದು ಶ್ಲಾಘನೀಯ ಎಂದರು.

ಸಹಕಾರ ಸಂಘದ ನೂತನ ಅನ್ನದಾತ ಸಭಾಂಗಣದಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಹೆಚ್.ಎಸ್ ತಿಮ್ಮಪ್ಪಯ್ಯ ವಹಿಸಿ ಮಾತನಾಡಿ, ಸಹಕಾರ ಸಂಘವು ಉತ್ತಮ ರೀತಿಯಿಂದ ಬೆಳೆದುಬರಲು ಎಲ್ಲರ ಸಹಕಾರ ಸಾಧ್ಯವೆಂದರು.

ಅತಿಥಿಗಳಾಗಿ ಪತ್ರಕರ್ತರುಗಳಾದ ಅಂಚೆಮನೆ ಸುಧಿಕುಮಾರ್, ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ ಸಹಕಾರ ಸಂಘದ ಆಂತರಿಕ ಲೆಕ್ಕಪರಿಶೋಧಕ ಹೆಚ್.ಬಿ. ರಮೇಶ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ, ಎನ್.ಎಸ್. ರವಿ ದೇವಯಾನಿ, ಮಾಲಾಶ್ರೀ, ಪೊರಿಮಂಡ ಧನು ದೇವಯ್ಯ, ಸೀತಮ್ಮ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ನೆರವೇರಿಸಿದರು.

ಸಂಜೆ ಕೊಯನಾಡಿನ ದೀಪಕ್ ಜಾನಪದ ಕಲಾ ತಂಡದಿಂದ ಶ್ರೀಕೃಷ್ಣಲೀಲೆ-ಕಂಸವಧೆ ಯಕ್ಷಗಾನ ಕಾರ್ಯಕ್ರಮ ನಡೆಯಿತು.