*ಗೋಣಿಕೊಪ್ಪಲು, ಮಾ. 30: ಕೆ.ಕೆ.ಆರ್. ಯುವಕ ಮಂಡಳಿ ವಾಲಿಬಾಲ್ ತಂಡದ ವತಿಯಿಂದ ಸೈಕಲ್ ಡ್ಯಾನ್ಸ್ ಬ್ಯಾಲೆನ್ಸ್ ಕಾಮೆಡಿ ಶೋ ನಡೆಸಲಾಯಿತು.
ಟಿ. ಶೆಟ್ಟಿಗೇರಿ ಸಮೀಪದ ಕೆ.ಕೆ.ಆರ್. ವಾಲಿಬಾಲ್ ಮೈದಾನದಲ್ಲಿ 3 ದಿನಗಳು ಚಾಮುಂಡೇಶ್ವರಿ ಮನೋಸೈಕಲ್ ಬ್ಯಾಲೆನ್ಸ್, ಲಕ್ಷ್ಮಣ ಕೀರ್ತಿ ತಂಡದವರಿಂದ ಪ್ರದರ್ಶನ ನಡೆಯಿತು.
ಕೆ.ಕೆ.ಆರ್. ಯುವಕ ಮಂಡಳಿÀಯ ವತಿಯಿಂದ ಕಲಾಪ್ರೇಮಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಯುವ ಮಂಡಳಿಯ ಪದಾಧಿಕಾರಿಗಳಾದ ಕಟ್ಟೇರ ಈಶ್ವರ, ಸೂರಜ್, ಮೀದೇರಿರ ನಿತಿನ್, ನಾಚಪ್ಪ, ಹರಿಕೃಷ್ಣ, ಚೋಟು ಬಾಬಣ್ಣ, ಬಿ.ಎಂ. ಅಪ್ಪಣ್ಣ, ಚೆಟ್ಟಂಗಡ ರಂಜು, ಮಾಣೀರ ಬೋಪಣ್ಣ, ಉಳುವಂಗಡ ದತ್ತ, ಮಚ್ಚಮಾಡ ಸುಮಂತ್, ಸಂತೋಷ್, ಪೆಮ್ಮಂಡ ಪ್ರವೀಣ್, ಅಣ್ಣದೊರೆ, ಬಿ.ಎನ್. ನವೀನ್, ಕಳ್ಳಿಚಂಡ ವಿನೋದ್, ಅಣ್ಣೀರ ಸಜನ್, ದೇಕಮಾಡ ಕಾರ್ಯಪ್ಪ, ಕಾಳಿಮಾಡ ತಿಮ್ಮಯ್ಯ, ಅಣ್ಣೀರ ಬೆಳ್ಯಪ್ಪ, ವಿನೋದ್, ಸಿಂದು, ರವೀಶ್, ಸಂತೋಷ್ ಹಾಗೂ ಗ್ರಾಮಸ್ಥರು ಹಾಜರಿದ್ದರು.