ನಾಪೆÇೀಕ್ಲು, ಮಾ. 31: ಕೇರಳ ರಾಜ್ಯದ ಕಾಸರಗೋಡು ಬಳಿಯ ಚೂರಿ ಗ್ರಾಮದ ಮಸೀದಿಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು, ಇತ್ತೀಚೆಗೆ ಹತ್ಯೆಗೊಳಗಾದ ಜಿಲ್ಲೆಯ ಹೊದವಾಡ ಗ್ರಾಮದ ರಿಯಾಜ್ó ಅವರ ಮನೆಗೆ ಕಾಸರಗೋಡಿನ ಸಂಸದ ಪಿ. ಕರುಣಾಕರನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕೇರಳದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕುಟುಂಬಸ್ಥರಿಗೆ ಸೂಕ್ತ ನೆರವು ಒದಗಿಸುವದಾಗಿ ಭರವಸೆ ನೀಡಿದರು. ಈ ಸಂದರ್ಭ ಸಿಪಿಎಂ ವಲಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಹೊದವಾಡ ಆಜಾದ್, ನಗರ ಮುಸ್ಲಿಂ ಜಮಾಅತ್ ಅಧ್ಯಕ್ಷ ಆಮು ಹಾಜಿ, ಹ್ಯಾರೀಸ್ ಕೆ.ಎ., ಮೃತರ ತಂದೆ ಟಿ.ಎ. ಸುಲೇಮಾನ್, ಮಾವ ಇಬ್ರಾಹಿಂ, ಕೊಟ್ಟಮುಡಿ ಹಂಸ ಮತ್ತಿತರರು ಇದ್ದರು.