ಮಡಿಕೇರಿ, ಮಾ. 31: ಕೊಡಗು ಜಿಲ್ಲೆಯಲ್ಲಿ ಸುಮಾರು 23 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಆದಿ ದ್ರಾವಿಡ ಸಮುದಾಯದಲ್ಲಿ ಒಡಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದು, ಇದಕ್ಕೆ ಸಮಾಜ ಬಾಂಧವರು ಕಿವಿಗೊಡದೆ ನೋಂದಣಿಯಾಗಿರುವ ಕೊಡಗು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದಲ್ಲಿ ಗುರುತಿಸಿಕೊಳ್ಳುವಂತೆ ಸಂಘÀದ ಜಿಲ್ಲಾಧ್ಯಕ್ಷರಾದ ಎಸ್. ಜನಾರ್ಧನ ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿದ್ರಾವಿಡ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶದಿಂದ 2011 ರಲ್ಲಿ ಸಂಘವನ್ನು ಸ್ಥಾಪಿಸಲಾಯಿತು. ಆದರೆ, ಇತ್ತೀಚೆಗೆ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸದÀ್ಯದಲ್ಲೆ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು, ಏ. 16 ರಂದು ಸಿದ್ದಾಪುರದಲ್ಲಿ ಡಾ. ಅಂಬೆÉೀಡ್ಕರ್ ಜಯಂತಿ ಆಚರಿಸಲಾಗುವದು ಎಂದರು. ಉಪಾಧ್ಯಕ್ಷ ಜಿ. ಕುಶಾಲಪ್ಪ ಮಾತನಾಡಿ, ವ್ಯಕ್ತಿಯೊಬ್ಬರು ಸಮುದಾಯದ ಮಂದಿಯಿಂದ ನೋಂದಣಿ ಶುಲ್ಕವೆಂದು ರೂ. 500 ಸಂಗ್ರಹಿಸುತ್ತಿದ್ದಾರೆಂದು ದೂರಿದರು.
ಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎನ್.ಪಿ. ಓಂಕಾರÀಪ್ಪ ಉಪಸ್ಥಿತರಿದ್ದರು.